ಬೆಂಗಳೂರು : ಭೋವಿ ಅಭಿವೃದ್ಧಿ ನಿಗಮದ ಬಹುಕೋಟಿ ರೂಪಾಯಿಗಳ ಅವ್ಯವಹಾರ ಪ್ರಕರಣದ ಆರೋಪಿಯಾಗಿದ್ದ ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣ ರಾಜ್ಯದಲ್ಲಿ ಭಾರೀ ಸದ್ದು ಮಾಡಿತ್ತು. ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ 24ನೇ ಎಸಿಎಂ ನ್ಯಾಯಾಲಯಕ್ಕೆ ಎಸ್ಐಟಿ ಚಾರ್ಜ್ ಶೀಟ್ ಸಲ್ಲಿಸಿದೆ.
ತನಿಖೆಯ ಬೆಳೆ ಚಿತ್ರೀಕರಿಸಿದ ವಿಡಿಯೋ, ಎಫ್ಎಸ್ಎಲ್ ರಿಪೋರ್ಟ್ ಎಲ್ಲವನ್ನು ಉಲ್ಲೇಖಿಸಿ ಎಸ್ಐಟಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದೆ. ಜೀವಾ ಆತ್ಮಹತ್ಯೆ ತನಿಖೆಗೆ ಹೈಕೋರ್ಟ್ ಎಸ್ಐಟಿ ರಚನೆ ಮಾಡಿತ್ತು. ಸಿಬಿಐ ಎಸ್ಪಿ ವಿನಾಯಕ್ ವರ್ಮ, ಸಿಸಿಬಿ ಡಿಸಿಪಿ ಅಕ್ಷಯ್ ಮಚ್ಚೀಂದ್ರ, ISD ಎಸ್ ಪಿ ನಿಶಾ ಜೇಮ್ಸ್ ಒಳಗೊಂಡ ಎಸ್ಐಟಿ ತಂಡ ರಚನೆಯಾಗಿತ್ತು. ತನಿಖೆ ನಡೆಸಿ 90 ದಿನದಲ್ಲಿ ಎಸ್ಐಟಿ ಹೈಕೋರ್ಟಿಗೆ ವರದಿ ಸಲ್ಲಿಸಿತ್ತು.
ವರದಿಯನ್ನು ಪರಿಶೀಲನೆ ನಡೆಸಿ ಹೈಕೋರ್ಟ್ ಮೆಚ್ಚುಗೆ ವ್ಯಕ್ತಪಡಿಸಿತು. ಬಳಿಕ ವಿಚಾರಣಾ ನ್ಯಾಯಾಲಯಕ್ಕೆ ಜಾರಿ ಶೀಟ್ ಸಲ್ಲಿಕೆಗೆ ಅನುಮತಿ ನೀಡಿತು. ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಿ, ಇದೀಗ ಎಸ್ಐಟಿ ಜಾರಿ ಶೀಟ್ ಸಲ್ಲಿಸಿದೆ. ವಕೀಲೆ ಜೀವಾ ಡೆತ್ ನೋಟ್ ನಲ್ಲಿ ಮಾಡಿದ ಬಹುತೇಕ ಆರೋಪಗಳು ಸಾಬೀತಾಗಿವೆ.
ಸದ್ಯ ಹೈಕೋರ್ಟ್ ಸೂಚನೆಯಂತೆ ಎಸ್ಐಟಿಯಿಂದ ಜಾರ್ಜ್ ಶೀಟ್ ಸಲ್ಲಿಸಲಾಗಿದೆ. ಬೆಂಗಳೂರಿನ ಬನಶಂಕರಿ ಠಾಣಾ ವ್ಯಾಪ್ತಿಯಲ್ಲಿ ಜೀವ ಆತ್ಮಹತ್ಯೆ ಮಾಡಿಕೊಂಡಿದ್ದರು. 2024 ನವೆಂಬರ್ 22ರಂದು ಮನೆಯಲ್ಲಿ ಜೀವ ಆತ್ಮಹತ್ಯೆ ಮಾಡಿಕೊಂಡಿದ್ದರು. Dysp ಕನಕಲಕ್ಷ್ಮಿ ಕಿರುಕುಳದ ಬಗ್ಗೆ ಹದಿಮೂರು ಪುಟಗಳ ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಶರಣಾಗಿದ್ದರು.