ಬೆಂಗಳೂರು : ಧರ್ಮಸ್ಥಳದಲ್ಲಿ ನೂರಕ್ಕೂ ಹೆಚ್ಚು ಶವಗಳನ್ನು ಹೂತು ಹಾಕಿದ್ದೇನೆ ಎಂದು ಅನಾಮಿಕ ವ್ಯಕ್ತಿ ಹೇಳಿಕೆ ನೀಡಿದ್ದು, ಈ ಹಿನ್ನೆಲೆಯನ್ನು ಕಳೆದ ಮೂರು ದಿನಗಳಿಂದ ಧರ್ಮಸ್ಥಳದಲ್ಲಿ ಎಸ್ಐಟಿ ತಂಡ ನೆಲ ಅಗೆದಿದ್ದು, ಇದುವರೆಗೂ ಯಾವುದೇ ರೀತಿಯ ಮನುಷ್ಯನ ದೇಹದ ಅಸ್ತಿಪಂಜರಗಳು ದೊರೆತಿಲ್ಲ. ಇದರ ಮಧ್ಯ ಎಸ್ಐಟಿ ಮುಖ್ಯಸ್ಥರಾಗಿರುವ ಪ್ರಣಬ್ ಮೋಹಂತಿ ಧರ್ಮಸ್ಥಳದಲ್ಲಿಯೇ ವಾಸ್ತವ ಹೂಡಿದ್ದು ಅವರು ಕೇಂದ್ರಕ್ಕೆ ಹೋಗುತ್ತಾರೆ ಎನ್ನುವ ವಿಚಾರ ತಿಳಿದು ಬಂದಿದೆ.
ಇದೇ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, SIT ಮುಖ್ಯಸ್ಥರ ಬದಲಾವಣೆ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು ಪ್ರಣಬ್ ಮೋಹಂತಿ ಕೇಂದ್ರ ಸರ್ಕಾರಕ್ಕೆ ಹೋದರೆ ಬದಲಾವಣೆ ಮಾಡಲಾಗುತ್ತದೆ. ಕೇಂದ್ರಕ್ಕೆ ಹೋದರೆ ಮಾತ್ರ ಬದಲಾವಣೆ ಮಾಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದರು.
ಇನ್ನು ಡಿಜಿ ಹಾಗು ಐಜೆಪಿ ಎಂ ಎ ಸಲೀಂ ಅವರು ಎಸ್ಐಟಿ ತಂಡಕ್ಕೆ ಮತ್ತೆ ಒಂಬತ್ತು ಪೊಲೀಸರನ್ನು ನೇಮಕ ಮಾಡಿ ಆದೇಶಿಸಿದ್ದಾರೆ ಈಗಾಗಲೇ ಪ್ರಕರಣದ ತನಿಖೆಗೆ 20 ಅಧಿಕ ಪೊಲೀಸರನ್ನು ನೇಮಕ ಮಾಡಲಾಗಿತ್ತು. ಆದರೆ ಇದೀಗ ಮತ್ತೆ ಒಂಬತ್ತು ಪೊಲೀಸರನ್ನು ನೇಮಕ ಮಾಡಿ ಎಂ.ಎ ಸಲೀಂ ಅವರು ಆದೇಶ ಹೊರಡಿಸಿದ್ದಾರೆ.