ಚಿಕ್ಕಮಗಳೂರು : ಮಹಿಳೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿ ರೇವಣ್ಣ ಕಾರು ಚಾಲಕ ಅಜಿತ್ ನನ್ನು ಇದೀಗ ಎಸ್ಐಟಿ ಅಧಿಕಾರಿಗಳು ಬುಧವಾರ ಚಿಕ್ಕಮಂಗಳೂರಿನಲ್ಲಿ ಸಂಬಂಧಿಕರ ಮನೆಯಲ್ಲಿ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಹೌದು ಬುಧವಾರ ರಾತ್ರಿ ಚಿಕ್ಕಮಗಳೂರಿನಲ್ಲಿ ಅಜಿತ್ ನನ್ನು ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಚಿಕ್ಕಮಗಳೂರಿನ ಸಂಬಂಧಿಕರ ಮನೆಯಲ್ಲಿದ್ದ ಚಾಲಕ ಅಜಿತ್ ಇರುವ ಮಾಹಿತಿಯನ್ನು ಆಧರಿಸಿ ಇದೀಗ ಆತನನ್ನು ಬಂಧಿಸಿದ್ದಾರೆ. ಮನೆಯಿಂದ ಸಂತ್ರಸ್ತೆ ಮಹಿಳೆಯನ್ನು ಕರೆದೋಯ್ದ ಆರೋಪದ ಹಿನ್ನೆಲೆಯಲ್ಲಿ ಚಿಕ್ಕಮಂಗಳೂರಿನಲ್ಲಿ ಅಜಿತ್ ಆಗಿ SIT ಅಧಿಕಾರಿಗಳು ಹುಡುಕಾಟ ನಡೆಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಅಜಿತ್ ಮಾವನ ಮನೆಯಲ್ಲಿ ಕೂಡ ಎಸ್ಐಟಿ ಅಧಿಕಾರಿಗಳು ಶೋಧ ನಡೆಸಿದರು. ಚಿಕ್ಕಮಗಳೂರಿನ ಕಲ್ಯಾಣ ನಗರದಲ್ಲಿರುವ ಅಜಿತ್ ಮಾವನ ಮನೆಯಲ್ಲಿ ಕೂಡ ಅಜಿತ್ ಕಾಗಿ ಹುಡುಕಾಟ ನಡೆಸಿದರು. ಸತ್ರಸ್ತೆ ವಿಡಿಯೋ ರೆಕಾರ್ಡ್ ಮಾಡಿ ವೈರಲ್ ಮಾಡಿರುವ ಆರೋಪ ಹಾಗೂ ಸಂತ್ರಸ್ತೆಯನ್ನು ಮನೆಯಿಂದ ಕಾರಿನಲ್ಲಿ ಕರೆದೊಯ್ದ ಆರೋಪದ ಹಿನ್ನೆಲೆಯಲ್ಲಿ ಇದೀಗ ಆತನನ್ನು ಬಂಧಿಸಲಾಗಿದೆ.
ಭವಾನಿ ರೇವಣ್ಣ ಸೂಚನೆಯ ಮೇರೆಗೆ ಅಜಿತ್ ಸಂತ್ರಸ್ತೆಯನ್ನು ಮನೆಯಿಂದ ಕಾರಿನಲ್ಲಿ ಕರೆದುಕೊಂಡು ಹೋಗಿದ್ದ ಆರೋಪ ಇತ್ತು. ಕಿಡ್ನ್ಯಾಪ್ ಬಗ್ಗೆ ಮೈಸೂರು ನಗರದ ಕೆ ಆರ್ ನಗರ ಠಾಣೆಗೆ ಸಂತ್ರಸ್ತಿಯ ಮಗ ದೂರು ನೀಡಿದ್ದ, ಇದೀಗ ಆತನನ್ನು ಬಂಧಿಸಿರುವ SIT ಅಧಿಕಾರಿಗಳು ಆತನ ವಿರುದ್ಧ FIR ಕೂಡ ದಾಖಲಿಸಿದ್ದಾರೆ.