ಹಾವೇರಿ : ಹಾವೇರಿಯಲ್ಲಿ ಪೋಷಕರು ಬೈದಿದ್ದಕ್ಕೆ ಮನೆ ಬಿಟ್ಟು ಹೋಗಿದ ಅಕ್ಕ-ತಂಗಿ ಇದೀಗ ಪುಣೆಯಲ್ಲಿ ಪತ್ತೆಯಾಗಿದ್ದಾರೆ. ಹಾವೇರಿಯಲ್ಲಿ ಇಬ್ಬರು ಸಹೋದರಿಯರು ಶಾಲೆಯಿಂದ ನಾಪತ್ತೆಯಾಗಿದ್ದರು. ಹಾವೇರಿಯ ಅಬ್ದುಲ್ ಖಾದರ್ ಲೋಹರ್ ಪುತ್ರಿಯರು ನಾಪತ್ತೆಯಾಗಿದ್ದರು ನಗರದ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಹೋದರಿಯರಿಬ್ಬರು ಓದುತ್ತಿದ್ದರು.
ಶನಿವಾರ ಶಾಲೆ ಮುಗಿಯುತ್ತಿದ್ದಂತೆ ವಿದ್ಯಾರ್ಥಿನಿಯರು ಕಾಣೆಯಾಗಿದ್ದರು. ಉಮ್ಮರ್ ಫಾತಿಮಾ ಹಾಗೂ ಉಮ್ಮಿ ಹಬೀಬಾ ನಾಪತ್ತೆಯಾಗಿದ್ದರು. ಮಕ್ಕಳು ನಾಪತ್ತೆಯಾಗಿದ್ದರಿಂದ ಆತಕದಿಂದ ಪೋಷಕರು ಹಾವೇರಿಯ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ. ಫಾತಿಮಾ ಮತ್ತು ಉಮ್ಮಿ ಹಬಿಬ ನಾಪತ್ತೆ ಪ್ರಕರಣದ ದಾಖಲಿಸಿಕೊಂಡ ಪೊಲೀಸರು ಇಬ್ಬರಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ. ಈ ವೇಳೆ ಫಾತಿಮಾ ಮತ್ತು ಉಮ್ಮಿ ಹಬಿಬ ಮಹಾರಾಷ್ಟ್ರದ ಪುಣೆಯಲ್ಲಿ ಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಇದೀಗ ಇಬ್ಬರನ್ನು ಪತ್ತೆಹಚ್ಚಿದ ಪೊಲೀಸರು ಪೋಷಕರಿಗೆ ಒಪ್ಪಿಸಿದ್ದಾರೆ.