ಬೆಳಗಾವಿ : ಬೆಳಗಾವಿಯಲ್ಲಿ ಭೀಕರವಾದ ಕೊಲೆಯಾಗಿದ್ದು , ಕೇವಲ 5000 ವಿಚಾರಕ್ಕೆ ಸಿಂಗರ್ ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬಳಿಕ ಕಾರು ಹತ್ತಿಸಿ ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಬೂದಿಹಾಳ ಬಳಿ ಈ ಒಂದು ಭೀಕರ ಕೊಲೆ ನಡೆದಿದೆ.
ಮಾರಕಸ್ತ್ರಗಳಿಂದ ಕೊಚ್ಚಿ ಮಾರುತಿ ಅಡಿವೆಪ್ಪ ಲಟ್ಟೇ (22) ಎನ್ನುವ ಸಿಂಗರ್ ನನ್ನು ಕೊಲೆ ಮಾಡಲಾಗಿದೆ. ಈರಪ್ಪ ಅಕ್ಕಿವಾಟೆ ಸೇರಿದಂತೆ 11 ಜನರಿಂದ ಗಾಯಕ ಮಾರುತಿಯನ್ನು ಭೀಕರವಾಗಿ ಕೊಲೆ ಮಾಡಲಾಗಿದ್ದು, ಉತ್ತರ ಕರ್ನಾಟಕ ಶೈಲಿಯಲ್ಲಿ ಹಾಡುತ್ತ ಮಾರುತಿ ರಂಜಿಸುತ್ತಿದ್ದ. ಬೈಕ್ ಮೇಲೆ ಸ್ನೇಹಿತನ ಜೊತೆಗೆ ಬರುತ್ತಿದ್ದ. ಈ ವೇಳೆ ಬೈಕ್ ಅಡ್ಡಕಟ್ಟಿ ದುಷ್ಕರ್ಮಿಗಳು ಮಾರುತಿಯನ್ನು ಭೀಕರವಾಗಿ ಕೊಲೆ ಮಾಡಿದ್ದಾರೆ. ಆರೋಪಿ ಈರಪ್ಪ ಬಳಿ ಮಾರುತಿ 50,000 ಸಾಲ ಪಡೆದಿದ್ದ. ಸಾವಿರ ರೂಪಾಯಿ ಪೈಕಿ 45,000 ಮಾರುತಿ ವಾಪಸ್ ನೀಡಿದ್ದ.
ಇತ್ತೀಚಿಗೆ ಮಾರುತಿಗೆ ಹಾಡಿನಲ್ಲಿ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಕೆಲಸ ಬಿಟ್ಟು ಆತ ಹಾಡುವುದರಲ್ಲಿ ಬ್ಯುಸಿಯಾಗಿದ್ದ. ಕೆಲಸಕ್ಕೂ ಹೋಗದೆ ಹಣ ವಾಪಸ್ ನೀಡುವ ನೀಡದ ಹಿನ್ನೆಲೆ ಮಾರುತಿಯನ್ನು ಕೊಲೆ ಮಾಡಲಾಗಿದೆ. ಹತ್ಯೆಯ ಬಳಿಕ ಮಾರುತಿಯ ಮೇಲೆ ಕಾರು ಹತ್ತಿಸಿ ಆರೋಪಿಗಳು ಕೊಲೆ ಮಾಡಿದ್ದಾರೆ. ಈ ವೇಳೆ ಕಾರು ಕೂಡ ಪಲ್ಟಿಯಾಗಿ ಆರೋಪಿಗಳು ಗಾಯಗೊಂಡಿದ್ದಾರೆ. ಗೋಕಾಕ್ ಸರ್ಕಾರಿ ಆಸ್ಪತ್ರೆಯಲ್ಲಿ ಆರೋಪಿ ಈರಪ್ಪಗೆ ಇದೀಗ ಚಿಕಿತ್ಸೆ ನೀಡಲಾಗುತ್ತಿದೆ.ಈ ವೇಳೆ ಪೊಲೀಸರು ಸಿದ್ಧರಾಮ ಒಡೆಯರ್ ಮತ್ತು ಆಕಾಶ್ ಪೂಜಾರಿಯನ್ನು ಅರೆಸ್ಟ್ ಮಾಡಿದ್ದಾರೆ ರಾಯಭಾಗ ಪೊಲೀಸ್ ಠಾಣೆಯಲ್ಲಿ 11 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.