ಬೆಂಗಳೂರು : ಕುಡಿಯಲು ಹಣ ಕೊಟ್ಟಿಲ್ಲ ಎಂದು ತಾಯಿಗೆ ಪಾಪಿ ಮಗನೋಬ್ಬ ಚಾಕು ಇರಿದ ಘಟನೆ ಬೆಂಗಳೂರಿನ ಜ್ಞಾನ ಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ. ತಾಯಿ ಜಯಲಕ್ಷ್ಮಿಗೆ ಚಾಕು ಇರಿದ ಪಾಪಿ ಪುತ್ರ ರಾಹುಲ್.
ಕುಡಿತದ ಚಟಕ್ಕೆ ಬಿದ್ದಿದ್ದ ರಾಹುಲ್ ಅಲಿಯಾಸ್ ಕಲರ್ಸ್, ಕೂಲಿ ಕೆಲಸ ಮಾಡಿ ತಾಯಿ ಜಯಲಕ್ಷ್ಮಿ ಮಗನ ಖರ್ಚಿಗೆ ಹಣ ಕೊಡುತ್ತಿದ್ದಳು. ಆದರೆ ಕಳೆದ ಎರಡು ಮೂರು ದಿನಗಳಿಂದ ಜಯಲಕ್ಷ್ಮಿ ಮಗನಿಗೆ ಖರ್ಚಿಗೆ ದುಡ್ಡು ಕೊಟ್ಟಿರಲಿಲ್ಲ. ಕುಡಿಯಲು ಹಣ ಕೊಡು ಅಂತ ಆರೋಪಿ ರಾಹುಲ್ ತಾಯಿಗೆ ಪೀಡಿಸುತ್ತಿದ್ದ. ಹಣ ಇಲ್ಲ ಎದ್ದಿದ್ದಕ್ಕೆ ತಾಳಿ ಕೊಡು ಎಂದು ಮಗ ಗಲಾಟೆ ಮಾಡಿದ್ದ.
ಗಲಾಟೆ ವೇಳೆ ಚಾಕು ಇರಿದು ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ. ಕೂಡಲೇ ಗಾಯಾಳು ಜಯಲಕ್ಷ್ಮಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಆರೋಪಿ ರಾಹುಲ್ ಅನ್ನು ಬಂಧಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನೆ ಕುರಿತು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.