ಹಾಸನ : ಹಾಸನದಲ್ಲಿ ಕುಡಿದ ನಶೆಯಲ್ಲಿ ಮಗನಿಂದಲೇ ತಂದೆಯ ಬರ್ಬರ ಹತ್ಯೆಯಾಗಿದ್ದು, ಕುಡಿದ ನಶೆಯಲ್ಲಿ ಪಾಪಿ ಮಗ ತಂದೆಯನ್ನು ಕೊಲೆ ಮಾಡಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಲಿಂಗಪುರ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಶಶಿಧರ್ (58) ಎಂದು ತಿಳಿದುಬಂದಿದೆ.ಕಂಠಪೂರ್ತಿ ಕುಡಿದು ತಂದೆ ಜೊತೆಗೆ ದಿನೇಶ್ ಜಗಳವಾಡಿದ್ದಾನೆ. ಮಾತಿಗೆ ಮಾತು ಬೆಳೆದು ಮಗನಿಂದ ತಂದೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು ಪಾಪಿ ಪುತ್ರ ದಿನೇಶ್ ಹತ್ಯೆ ಗೈದಿದ್ದಾನೆ. ಈ ವೇಳೆ ಗಾಬರಿಗೊಂಡು ದಿನೇಶ್ ತಾಯಿ ಮನೆಯಿಂದ ಸಹೋದರನ ಮನೆಗೆ ಹೋಗಿದ್ದಾರೆ.
ಇತ್ತ ದಿನೇಶ್ ಕೊಲೆ ಮಾಡಿದ ತಂದೆಯನ್ನು ಹೃದಯಾಘಾತವಾಗಿದೆ ಎಂದು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ. ಬಳಿಕ ಆಸ್ಪತ್ರೆಯಿಂದ ಬಂದು ಅಂತ್ಯಕ್ರಿಯೆಗೂ ಕೂಡ ಗಣೇಶ ಸಿದ್ಧತೆ ಮಾಡಿಕೊಂಡಿದ್ದ ಎನ್ನಲಾಗಿದೆ. ಪೊಲೀಸರು ಆತನ ವಶಪಡಿಸಿಕೊಂಡು ವಿಚಾರಣೆಗೆ ಒಳಪಡಿಸಿದಾಗ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಸದ್ಯ ಅರೆಹಳ್ಳಿ ಠಾಣೆ ಪೊಲೀಸರು ಅರೇಸ್ಟ್ ಮಾಡಿದ್ದಾರೆ.