ಕಲಬುರ್ಗಿ : ತಾನು ಮಾಡಿದಂತಹ ಸಾಲವನ್ನು ತೀರಿಸಲಾಗದೆ ತಂದೆಯ ಹೆಸರಲ್ಲಿ ಇನ್ಶೂರೆನ್ಸ್ ಮಾಡಿಸಿ, ಬಳಿಕ ತಂದೆಯನ್ನು ಹತ್ಯೆಗೈದು ಇನ್ಸೂರೆನ್ಸ್ ಹಣದಿಂದ ಸಾಲ ತೀರಿಸಲು ಪುತ್ರನೊಬ್ಬ ಟ್ರಾಕ್ಟರ್ ನಿಂದ ಡಿಕ್ಕಿ ಹೊಡೆಸಿ ಕೊಲೆ ಮಾಡಿರುವ ಘಟನೆ ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಬೆಣ್ಣೂರ್ (ಬಿ) ಗ್ರಾಮದಲ್ಲಿ ನಡೆದಿದೆ. ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಹೌದು ತಾನು ಮಾಡಿದ್ದ ಸಾಲ ತೀರಿಸಲು ಐಡಿಯಾ ಮಾಡಿದ ಪುತ್ರನೊಬ್ಬ ತಂದೆ ಹೆಸರಿನಲ್ಲಿ ಇನ್ಸೂರೆನ್ಸ್ ಮಾಡಿಸಿ ಪುತ್ರನೇ ಹತ್ಯೆಗೈದಿರುವ ಘಟನೆ ನಡೆದಿದೆ. ಆಕ್ಸಿಡೆಂಟ್ ನಲ್ಲಿ ತಂದೆಯನ್ನು ಸಾಯಿಸಿದ ಪುತ್ರ. ಮೃತರನ್ನು ಕಾಳಿಂಗರಾವ್ ಎಂದು ಹೇಳಲಾಗುತ್ತಿದೆ. ಜುಲೈ 8 ಕ್ಕೆ ಕಾಳಿಂಗರಾವ್ ಸ್ಕೂಟಿಯಲ್ಲಿ ಬರುವಾಗ ಅಪಘಾತವಾಗಿತ್ತು. ಕಲ್ಬುರ್ಗಿ ಚಿತ್ತಾಪುರ ಬೆಣ್ಣೂರ್ (ಬಿ) ಕ್ರಾಸ್ ಬಳಿ ಒಂದು ಅಪಘಾತ ನಡೆದಿತ್ತು.
ಕಳೆದ ವರ್ಷ ಜುಲೈ 8ರಂದು ಕಲ್ಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಬೆಣ್ಣೂರು (ಬಿ) ಗ್ರಾಮದಲ್ಲಿ ಸ್ಕೂಟಿಯಲ್ಲಿ ತೆರಳುತ್ತಿದ್ದ ಕಾಳಿಂಗರಾವ್ ಅವರಿಗೆ ಅವರ ಪುತ್ರ ಸತೀಶ್, ಟ್ರಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿಯಲ್ಲಿದ್ದ ಕಾಳಿಂಗರಾವ್ ಸಾವನಪ್ಪಿದ್ದರು. ಇದು ಒಂದು ಅಪಘಾತವೆಂದು ಬಿಂಬಿಸಲಾಗಿತ್ತು. ಆದರೆ ಪೊಲೀಸರು ಈ ಒಂದು ಪ್ರಕರಣದ ಜಾಡು ಹಿಡಿದು ಹೊರಟಾಗ ಶಾಕ್ ಆಗಿದ್ದು, ಪುತ್ರ ಸತೀಶ್ ಇನ್ಸೂರೆನ್ಸ್ ಹಣಕ್ಕಾಗಿ ತಾನು ಮಾಡಿದ ಸಾಲ ತೀರಿಸುವ ಸಲುವಾಗಿ ಹೆತ್ತ ತಂದೆಯನ್ನೇ ಟ್ಯಾಕ್ಟರ್ ನಿಂದ ಡಿಕ್ಕಿ ಹೊಡೆಸಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಟ್ರ್ಯಾಕ್ಟರ್ ಇಂದ ಡಿಕ್ಕಿ ಹೊಡೆಯಿಸಿ ಆರೋಪಿಗಳು ಕಾಳಿಂಗರಾವ್ ಅವರನ್ನು ಕೊಲೆಗೈದಿದ್ದರು. ಇದೀಗ ಪ್ರಕರಣ ಭೇದಿಸಿದ ಪೊಲೀಸರು ಪುತ್ರನೇ ತಂದೆಯನ್ನು ಹತ್ಯೆ ಮಾಡಿದ್ದಾನೆ ಎಂದು ಈಗ ಆತನನ್ನು ಅರೆಸ್ಟ್ ಮಾಡಿದ್ದಾರೆ. ಅಲ್ಲದೆ ಆತನಿಗೆ ಸಾತ್ ನೀಡಿದ ಉಳಿದ ನಾಲ್ವರನ್ನು ಅರೆಸ್ಟ್ ಮಾಡಿದ್ದಾರೆ. ಪುತ್ರ ಸತೀಶ್, ರಾಕೇಶ್ ಸೇರಿದಂತೆ ನಾಲ್ವರನ್ನು ಅರೆಸ್ಟ್ ಮಾಡಿದ್ದಾರೆ.