ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಮರ್ಡರ್ ನಡೆದಿದ್ದು, ಶಾಪಿಂಗ್ ಗೆ ಹೋಗಿದ್ದಕ್ಕೆ ಪತ್ನಿಯನ್ನು ಪತಿಯೋಬ್ಬ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಬೊಮ್ಮನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪತಿ ಪದ್ಮಜ (29) ರನ್ನು ಪತಿ ಹರೀಶ್ ಕೊಲೆ ಮಾಡಿದ್ದಾನೆ. ಶಾಪಿಂಗ್ ಹೋಗಿದ್ದಕ್ಕೆ ಕುತ್ತಿಗೆ ಹಿಸುಕಿ ಕಾಲಿನಿಂದ ತುಳಿದು ಉಸಿರು ಗಟ್ಟಿಸಿ ಪತ್ನಿಯನ್ನು ಭೀಕರವಾಗಿ ಕೊಲೆ ಮಾಡಿದ್ದಾನೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಮೂಲದ ದಂಪತಿಗಳು ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಬೊಮ್ಮನಹಳ್ಳಿ ಠಾಣೆ ಪೊಲೀಸ್ರು ಭೇಟಿ ನೀಡಿದ್ದು ಪ್ರಕರಣದ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.ದಂಪತಿಗಳು ಇಬ್ಬರು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.
ಇಬ್ಬರು ಬಿಇ ಮುಗಿಸಿಕೊಂಡಿದ್ದು, ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕೋಲಾರದ ಶ್ರೀನಿವಾಸಪುರ ಮೂಲದವರು ಎಂದು ತಿಳಿದುಬಂದಿದ್ದು, ಕೆಲ ತಿಂಗಳಿನಿಂದ ಗಂಡ ಹರೀಶ್ ಕೆಲಸ ಬಿಟ್ಟು ಮನೆಯಲ್ಲಿಯೇ ಇದ್ದ. ಪತ್ನಿಯ ಜೊತೆಗೆ ನಿತ್ಯ ಗಲಾಟೆ ಮಾಡುತ್ತಿದ್ದ. ಆದರೆ ನಿನ್ನೆ ಶಾಪಿಂಗ್ ಗೆ ಹೋಗಿ ಬಂದಿದ್ದಕ್ಕೆ ಪತ್ನಿ ಜೊತೆಗೆ ಹರೀಶ್ ಗಲಾಟೆ ಮಾಡಿದ್ದಾನೆ.ಈ ವೇಳೆ ಗಲಾಟೆ ವಿಕೋಪಕ್ಕೆ ತಿರುಗಿ ಹೆಂಡತಿಯ ಕುತ್ತಿಗೆಯ ಮೇಲೆ ಕಾಲಿಟ್ಟು ಉಸಿರುಗಟ್ಟಿಸಿ ಭೀಕರವಾಗಿ ಕೊಲೆ ಮಾಡಿದ್ದಾನೆ.