ದಾವಣಗೆರೆ : ವರದಕ್ಷಿಣೆಗಾಗಿ ಪಾಪಿ ಗಂಡನೊಬ್ಬ ತನ್ನ ಪತ್ನಿಯ ಕುತ್ತಿಗೆಗೆ ಸೀರೆಯಿಂದ ಬಿಗಿದು ಉಸಿರುಗಟ್ಟಿಸಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹರಳಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹತ್ಯೆಯಾದ ಮಹಿಳೆಯನ್ನು ನೇತ್ರಾವತಿ (26) ಎಂದು ತಿಳಿದುಬಂದಿದೆ. ಕಳೆದ 7 ವರ್ಷದ ಹಿಂದೆ ಕುಟುಂಬಸ್ಥರು ಹರಳಹಳ್ಳಿ ಗ್ರಾಮದ ದೇವೇಂದ್ರಪ್ಪನ ಜೊತೆ ನೇತ್ರಾವತಿಯವರನ್ನು ಮದುವೆ ಮಾಡಿಕೊಟ್ಟಿದ್ದರು.
ಮದುವೆ ಸಂದರ್ಭದಲ್ಲಿ ಕುಟುಂಬಸ್ಥರು ವರದಕ್ಷಿಣೆಯಾಗಿ 10 ತೊಲ ಬಂಗಾರ 1 ಲಕ್ಷ ರೂ. ನಗದು ಹಾಗೂ ಬೈಕ್ ಕೊಡಿಸಿದ್ದರು. ಆದರೂ ದೇವೇಂದ್ರಪ್ಪ ನೇತ್ರಾವತಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.