ಚಿತ್ರದುರ್ಗ : ಚಿತ್ರದುರ್ಗದ ಮುರುಘಾ ಮಠದಲ್ಲಿದ್ದ ಮುರುಘಾಶ್ರೀಗಳ ಬೆಳ್ಳಿ ಪುತ್ತಳಿಯನ್ನು ಖದಿಮರು ಕಳ್ಳತನ ಮಾಡಿದ್ದಾರೆ. ಶ್ರೀಗಳ ಸುಮಾರು 20 ಕೆಜಿ ತೂಕದ 20 ಲಕ್ಷ ಮೌಲ್ಯದ ಪುತ್ತಳಿಯನ್ನ ಕಳ್ಳತನ ಮಾಡಿದ್ದಾರೆ.
ಈ ಕುರಿತು ಮಠದ ಬಸವಪ್ರಭು ಶ್ರೀ ಮಾತನಾಡಿದ್ದು ಜೂನ್ 26 ರಿಂದ ಮಠದ ದರ್ಬಾರ ಹಾಲ್ ಸಿಸಿಟಿವಿ ಆಫ್ ಆಗಿದೆ. ದರ್ಬಾರ್ ಹಾಲಿನಲ್ಲಿದ್ದ ಬೆಳ್ಳಿ ಪುತ್ತಳಿ ಕಳ್ಳತನ ಆಗಿದೆ. ಬೆಳ್ಳಿ ಪುತ್ಥಳಿ ಕಳ್ಳತನದ ಬಗ್ಗೆ ಪೊಲೀಸರಿಗೆ ದೂರು ನೀಡುತ್ತೇವೆ. ಆಡಳಿತ ಮಂಡಳಿ ಸದಸ್ಯ ಬಸವಕುಮಾರ ಶ್ರೀ ದೂರು ನೀಡುತ್ತಾರೆ ಎಂದು ಚಿತ್ರದುರ್ಗದ ಮುರುಘಾ ಮಠದಲ್ಲಿ ಬಸವಪ್ರಭುಶ್ರೀ ಹೇಳಿಕೆ ನೀಡಿದರು.
ಇನ್ನು ಫೋಕ್ಸೋ ಪ್ರಕರಣ ಸಂಬಂಧ ಚಿತ್ರದುರ್ಗದ ಮುರುಘಾ ಮಠದ ಮುರುಘಾಶ್ರೀ ಷರತ್ತು ಬದ್ಧ ಜಾಮೀನಿನ ಮೇಲೆ ಹೊರಗಿದ್ದಾರೆ. ಅಲ್ಲದೆ, ಜೈಲಿನಿಂದ ಬಿಡುಗಡೆಯಾದ ನಂತರ ಮುರುಘಾ ಮಠ ಹಾಗೂ ಎಸ್ಜೆಎಂ ವಿದ್ಯಾಪೀಠದ ಆಡಳಿತ ನೋಡಿಕೊಳ್ಳುತ್ತಿದ್ದರು. ಇದನ್ನು ಪ್ರಶ್ನಿಸಿ ಮಾಜಿ ಸಚಿವ ಎಚ್.ಏಕಾಂತಯ್ಯ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಅದರಂತೆ, ಮುರುಘಾ ಶ್ರೀ ಆಡಳಿತಕ್ಕೆ ಸುಪ್ರೀಂಕೋರ್ಟ್ ನಿರ್ಬಂಧ ವಿಧಿಸಿದೆ.
ಫೋಕ್ಸೋ ಪ್ರಕರಣದಡಿ ಆರೋಪಿಯಾಗಿರುವ ಮುರುಘಾ ಶ್ರೀ ಕೈಗೆ ಮಠದ ಆಡಳಿತ ನೀಡಿದ್ದನ್ನು ಪ್ರಶ್ನಿಸಿ ಮಾಜಿ ಸಚಿವ ಎಚ್.ಏಕಾಂತಯ್ಯ ಅವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಅದರಂತೆ ಇಂದು ಮಧ್ಯಂತ ಆದೇಶ ನೀಡಿದ ಸುಪ್ರೀಂಕೋರ್ಟ್, ಮುರುಘಾಶ್ರೀ ಆಡಳಿತಕ್ಕೆ ನಿರ್ಬಂಧ ವಿಧಿಸಿದೆ. ಅಲ್ಲದೆ, ಮುರುಘಾಮಠ ಹಾಗೂ ಎಸ್ಜೆಎಂ ವಿದ್ಯಾಪೀಠ ಆಡಳಿತಕ್ಕೆ ಮೂರು ದಿನದಲ್ಲಿ ಸಮಿತಿ ರಚಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಿದೆ.