ನವದೆಹಲಿ : ದೇಶದಲ್ಲಿ ಹೆಚ್ಚುತ್ತಿರುವ ಆನ್‌ಲೈನ್ ಹಣಕಾಸು ವಂಚನೆಗಳನ್ನು ತಡೆಗಟ್ಟಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳನ್ನು ತರಲು ನಿರ್ಧರಿಸಿದೆ. ಈ ಹೊಸ ಮಾರ್ಗಸೂಚಿಯ ಪ್ರಕಾರ, ಇನ್ಮುಂದೆ ಯುಪಿಐ (UPI) ಮೂಲಕ ಹಣ ಪಾವತಿ ಮಾಡುವಾಗ ಕೇವಲ ಒನ್ ಟೈಮ್ ಪಾಸ್‌ವರ್ಡ್ (OTP) ಅಥವಾ ಪಿನ್ (PIN) ಮಾತ್ರ ಸಾಕಾಗುವುದಿಲ್ಲ. ಬದಲಾಗಿ, ‘ಮಲ್ಟಿ ಫ್ಯಾಕ್ಟರ್ ಅಥೆಂಟಿಕೇಶನ್’ (Multi-factor Authentication) ಅಡಿಯಲ್ಲಿ ಡಬಲ್ ಸೆಕ್ಯೂರಿಟಿಯನ್ನು ಕಡ್ಡಾಯಗೊಳಿಸಲು ಆರ್‌ಬಿಐ ಮುಂದಾಗಿದೆ.
ನಾಳೆಯಿಂದಡಿಜಿಟಲ್ ಪಾವತಿಯಲ್ಲಿ ನಿಯಮ ಬದಲಾವಣೆ ಆಗುತ್ತಿದೆ. RBI ಆರ್ಥಿಕ ವರ್ಷದ ಆರಂಭದಲ್ಲಿ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ್ದು ಆನ್ಲೈನ್ ವೈವಾಟಿಗೆ ಏಪ್ರಿಲ್ ಒಂದರಿಂದ ಹೊಸ ರೂಲ್ಸ್ ನಾಳೆಯಿಂದ ಅನ್ವಯವಾಗುತ್ತಿದೆ ಸಾಲದು ಅದರ ಜೊತೆಗೆ ಕಡ್ಡಾಯ UPI ಕಾರ್ಡ್, ವಾಲೆಟ್ ಪಾವತಿಗಳಿಗೆ ಎರಡು ಫ್ಯಾಕ್ಟರ್ ಅಥೆಂಟಿಕೇಶನ್ ಸೈಬರ್ ವಂಚನೆತ್ರೆಯಿಂದ ಕಠಿಣ ಸುರಕ್ಷತಾ ಕ್ರಮ ಜಾರಿ ಮಾಡಿದೆ ವ್ಯವಸ್ಥೆಯ ವೈಫಲ್ಯದಿಂದ ಹಣ ಕಳೆದುಕೊಂಡರೆ ಬ್ಯಾಂಕುಗಳೆ ಹೊಣೆ ಆಗಲಿವೆ. ಪಿನ್ ಅಥವಾ ಬಯೋಮೆಟ್ರಿಕ್ ಮೂಲಕ ಎರಡನೇ ಹಂತದ ದೃಢೀಕರಣ ಅನಿವಾರ್ಯ.
ದೊಡ್ಡ ಮೊತ್ತದ ಹಣ ವರ್ಗಾವಣೆಗೆ ಹೆಚ್ಚುವರಿ ಭದ್ರತಾ ತಪಾಸಣೆ ವಂಚನೆಗೆ ಒಳಗಾದವರಿಗೆ ಬ್ಯಾಂಕುಗಳಿಂದ ಶೀಘ್ರ ಪರಿಹಾರ ಸಿಗುವ ಸಾಧ್ಯತೆ ಇದೆ ಅಂತರಾಷ್ಟ್ರೀಯ ಪಾವತಿಗಳಿಗೂ ಇದೇ ಕಠಿಣ ನಿಯಮಗಳು ಅನ್ವಯಗಳು ಸುರಕ್ಷಿತ ವಹಿವಾಟಿಕೆ ಆರ್ ಬಿ ಐ ಹೆಚ್ಚಿನ ಆದ್ಯತೆ ನೀಡಿದೆ.ಪ್ರಸ್ತುತ ನಾವು ಯುಪಿಐ ಪಿನ್ ನಮೂದಿಸುವ ಮೂಲಕ ಹಣ ವರ್ಗಾವಣೆ ಮಾಡುತ್ತಿದ್ದೇವೆ. ಆದರೆ ಹೊಸ ಮಾರ್ಗಸೂಚಿಯಂತೆ, ವಹಿವಾಟಿನ ಸುರಕ್ಷತೆಯನ್ನು ಹೆಚ್ಚಿಸಲು ಈ ಕೆಳಗಿನ ಯಾವುದಾದರೂ ಒಂದು ಹೆಚ್ಚುವರಿ ಕ್ರಮವನ್ನು ಅಳವಡಿಸಿಕೊಳ್ಳಬೇಕಾಗುತ್ತದೆ.
ಆರ್‌ಬಿಐ ಈ ಹೊಸ ಫ್ರೇಮ್‌ವರ್ಕ್ ಕುರಿತು ಈಗಾಗಲೇ ಬ್ಯಾಂಕ್‌ಗಳಿಗೆ ಮತ್ತು ಪಾವತಿ ಸೇವಾ ಸಂಸ್ಥೆಗಳಿಗೆ ಸೂಚನೆ ನೀಡಿದೆ. ಸೈಬರ್ ಕ್ರಿಮಿನಲ್‌ಗಳು ಓಟಿಪಿಗಳನ್ನು ಸುಲಭವಾಗಿ ಹ್ಯಾಕ್ ಮಾಡುತ್ತಿರುವ ಹಿನ್ನೆಲೆಯಲ್ಲಿ, ಗ್ರಾಹಕರ ಖಾತೆಯಲ್ಲಿರುವ ಹಣಕ್ಕೆ ಹೆಚ್ಚಿನ ರಕ್ಷಣೆ ನೀಡಲು ಈ ‘ಡಬಲ್ ಫಿಲ್ಟರ್’ ವ್ಯವಸ್ಥೆಯನ್ನು ನಾಳೆಯಿಂದಲೇ ಜಾರಿಗೆ ತರಲಾಗುತ್ತಿದೆ.








