ಬೆಂಗಳೂರು : ನಿನ್ನೆ ಸಿಎಂ ಸಿದ್ದರಾಮಯ್ಯ ಹೈಕಮಾಂಡ್ ತೀರ್ಮಾನ ಮಾಡಿದರೆ ನಾನೇ ಐದು ವರ್ಷಗಳ ಕಾಲ ಸಿಎಂ ಎಂದು ಹೇಳಿಕೆ ನೀಡಿದ್ದು, ಭಾರಿ ಸಂಚಲನ ಸೃಷ್ಟಿಸಿದೆ. ಇದೀಗ ಸಿದ್ದರಾಮಯ್ಯ ಸಿಎಂ ಆಗಿ ಆರಿಸಿದ್ದು ಎರಡುವರೆ ವರ್ಷಕ್ಕೆ ಅಲ್ಲ. ಅಧಿಕಾರ ಹಂಚಿಕೆ ಇದೆ ಎಂದು ನಮಗೆ ಯಾರು ಹೇಳಿಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದರು.
ಬೆಂಗಳೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಸಿದ್ದರಾಮಯ್ಯ ಅವರನ್ನು ಸಿಎಂ ಆಗಿ ಆರಿಸಿದ್ದು ಎರಡೂವರೆ ವರ್ಷಕ್ಕೆ ಅಲ್ಲ. ಅಧಿಕಾರ ಹಂಚಿಕೆ ಇದೆ ಎಂದು ನಮಗೆ ಯಾರು ಹೇಳಿಲ್ಲ. ಅಧಿಕಾರ ಹಂಚಿಕೆ ಇದ್ದರೆ ಹೈಕಮಾಂಡ್ ನಮಗೆ ಹೇಳಲಿ. ನಾವು ಸಿಎಲ್‌ಪಿ ನಾಯಕರನ್ನು ಆಯ್ಕೆ ಮಾಡಿದಾಗ, ನಮ್ಮ ಪಕ್ಷ ಮೆಜಾರಿಟಿ ಬಂದಾಗ ಎಲ್ಲಾ ಶಾಸಕರನ್ನು ಕರೆದು ಸಿಎಲ್‌ಪಿ ನಾಯಕರನ್ನು ಆಯ್ಕೆ ಮಾಡಿದೆವು. ಅವತ್ತು ನಮಗೆ ಯಾವುದೇ ದೃಷ್ಟಿಯಿಂದ ಸಿದ್ದರಾಮಯ್ಯ ಬರಿ ಎರಡುವರೆ ವರ್ಷ ಮುಖ್ಯಮಂತ್ರಿ ಅಂತ ಹೇಳಿಲ್ಲ.
ಹೈಕಮಾಂಡ್ ಅವರು ಸಹ ಸಿದ್ದರಾಮಯ್ಯ ಅವರು ಸಿಎಲ್ ಪಿ ನಾಯಕ ಎಂದು ಘೋಷಣೆ ಮಾಡಿದ್ದು ಬಿಟ್ಟರೆ ಯಾವುದೇ ಸಮಯ ನಿಗದಿ ಮಾಡಿಲ್ಲ. ಮಧ್ಯದಲ್ಲಿ ಏನೇನು ಬೆಳವಣಿಗೆಯಾಗಿದೆ ನಮಗೆ ಗೊತ್ತಿಲ್ಲ. ನಮ್ಮ ನಿಟ್ಟಿನಲ್ಲಿ ನಾವು ಆಯ್ಕೆ ಮಾಡಿರುವುದು ಸಿದ್ದರಾಮಯ್ಯ ಅವರನ್ನು 5 ವರ್ಷಗಳ ಕಾಲ ಮುಖ್ಯಮಂತ್ರಿ ಆಗಿ ಇರಿ ಎಂದು ಆಯ್ಕೆ ಮಾಡಿದ್ದೇವೆ. ಅದರ ಮೇಲೆ ಹೈಕಮಾಂಡ್ ಏನು ಹೇಳುತ್ತೆ ಅದನ್ನು ಒಪ್ಪಿಕೊಳ್ಳುತ್ತೇವೆ. ಸಿಎಲ್‌ಪಿ ಆಯ್ಕೆ ಮಾಡುವಾಗ ಸಮಯ ಯಾವುದು ನಿಗದಿ ಮಾಡಿಲ್ಲ.
ಮಧ್ಯದಲ್ಲಿ ಹೈಕಮಾಂಡ ಏನಾದರೂ ನಿರ್ಧಾರ ಮಾಡಿದರೆ ಹೈಕಮಾಂಡ್ ನಿರ್ಧಾರ ತೆಗೆದುಕೊಂಡರು ಅದಕ್ಕೆ ನಾವು ಬದ್ದರಾಗಿದ್ದವೇ. ಈ ವಿಚಾರವಾಗಿ ಪ್ರತಿದಿನ ಬೇರೆ ಬೇರೆ ಹೇಳಿಕೆ ನೀಡುವುದು ಸರಿಯಲ್ಲ. ಸಿದ್ದರಾಮಯ್ಯ ಅವರು ನಿನ್ನೆ ಕೂಡ ಅವರು ಅದನ್ನೇ ಹೇಳಿದ್ದಾರೆ ಹೈಕಮಾಂಡ್ ಒಪ್ಪಿದರೆ ನಾನು 5 ವರ್ಷ ನಾನೇ ಮುಖ್ಯಮಂತ್ರಿ ಆಗಿರುತ್ತೇನೆ ಅಂತ ಹೇಳಿದ್ದಾರೆ. ಸಮಯ ಬಂದಾಗ ನಾನು ಹೈಕಮಂಡ್ ಗೆ ರಿಕ್ವೆಸ್ಟ್ ಮಾಡುತ್ತೇನೆ ಈ ಗೊಂದಲಗಳನ್ನು ಬಗೆಹರಿಸಿ ಎಂದು ಮನವಿ ಮಾಡುತ್ತೇನೆ ಎಂದರು.








