ಬೆಂಗಳೂರು : ಮುಂದಿನ ಚುನಾವಣೆ ಗೆಲ್ಲಬೇಕೆಂದರೆ ಸಿಎಂ ಸಿದ್ದರಾಮಯ್ಯ ಇರಲೇಬೇಕು. ಚುನಾವಣೆ ಗೆಲ್ಲಲು ಅನುಕೂಲವಾಗುತ್ತದೆ ಇನ್ನೊಂದು ಅವಧಿಯವರೆಗೆ ಸಿಎಂ ಸಿದ್ದರಾಮಯ್ಯ ರಾಜಕೀಯದಲ್ಲಿರಬೇಕು ಎಂದು ಬೆಂಗಳೂರಿನಲ್ಲಿ ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ನಮಗೆ ಬೇಕೇ ಬೇಕು ಅವರು ಒಳ್ಳೆಯ ಆಡಳಿತ ಕೊಡುತ್ತಿದ್ದಾರೆ. ಸಿಎಂ ನಿವೃತ್ತಿ ಆದರೂ ಪಕ್ಷದ ಪರವಾಗಿ ಕೆಲಸ ಮಾಡಬೇಕು. ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯ ಇರದಿದ್ದರೂ ಅವರು ಇರಬೇಕು ಹೊಸ ನಾಯಕತ್ವ ತಯಾರಾಗುವವರೆಗೆ ಅವರ ಇರುವಿಕೆ ಅನಿವಾರ್ಯವಾಗಿದೆ ಎಂದು ತಿಳಿಸಿದರು.
ಇನ್ನು ಅಧಿಕಾರ ಹಂಚಿಕೆಯ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಖರ್ಗೆ ಸುರ್ಜೆವಾಲಾ ಈ ಕುರಿತು ಎಲ್ಲಾ ಹೇಳಬೇಕು ಪವರ್ ಶೇರಿಂಗ್ ಬಗ್ಗೆ ನನಗೆ ಗೊತ್ತಿಲ್ಲ. ಇದೆಲ್ಲ ನಮ್ಮ ವ್ಯಾಪ್ತಿಯಲ್ಲಿ ಇಲ್ಲ. ಪವರ್ ಶೇರಿಂಗ್ ಆಗಿದೆಯೋ ಇಲ್ಲವೋ ನಮಗೆ ಆ ವಿಷಯದ ಕುರಿತು ಗೊತ್ತಿಲ್ಲ. ಇವರೇ ಮುಂದುವರೆಯುತ್ತಾರೋ ಅದು ಗೊತ್ತಿಲ್ಲ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಕುರಿತು ಸಹ ಗೊತ್ತಿಲ್ಲ. ಆದರೆ ಅಧ್ಯಕ್ಷ ಸ್ಥಾನ ಬದಲಾವಣೆ ಮಾಡುತ್ತಾರ ಇಲ್ಲವ ಎನ್ನುವುದರ ಕುರಿತು ಕಾದು ನೋಡೋಣ.
ಪಕ್ಷದಲ್ಲಿ ವಿರೋಧ ಅನ್ನುವುದು ಏನು ಇಲ್ಲ ಹಕ್ಕುಗಳನ್ನು ಕೇಳುತ್ತೇವೆ ಅದನ್ನ ವಿರೋಧ ಅನ್ನುವುದಕ್ಕೆ ಆಗಲ್ಲ. ನಮ್ಮ ಅಭಿಪ್ರಾಯ ಹೇಳಲು ನಾವು ಸ್ವತಂತ್ರ ಇದ್ದೇವೆ ಅದನ್ನು ಹೈಕಮಾಂಡ್ ಗೆ ಹೇಳಿದ್ದೇವೆ ಅಷ್ಟೇ ಯಾರ ಪರ ಅಥವಾ ಯಾರ ವಿರೋಧ ಎನ್ನುವುದು ಇಲ್ಲಿ ಇಲ್ಲ. ಎಲ್ಲಾ ಒಂದೇ ಪಕ್ಷದಲ್ಲಿ ಇದ್ದೇವೆ ಎಂದು ಸಚಿವ ಸತೀಶ್ ಜಾರಕಿಹೊಳಿಯವರು ಇದೇ ಸಂದರ್ಭದಲ್ಲಿ ತಿಳಿಸಿದರು.