ಮೈಸೂರು : ಡಿ ದೇವರಾಜು ಅರಸು ಅವರ ಬಳಿಕ ದೀರ್ಘಾವಧಿ ಮುಖ್ಯಮಂತ್ರಿ ಎಂದು ಸಿಎಂ ಸಿದ್ದರಾಮಯ್ಯ ಅವರು ಪಾತ್ರರಾಗಿದ್ದಾರೆ. ಇದೆ ಸಂದರ್ಭದಲ್ಲಿ ಪೂರ್ಣಾವಧಿ ಸಿಎಂ ಆಗುವ ವಿಶ್ವಾಸ ನನಗಿದೆ ಎಂದು ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಐದು ವರ್ಷಗಳ ಕಾಲ ನಾನೇ ಸಿಎಂ ಎಂದು ಘೋಷಿಸಿದರು.
ಮೈಸೂರಿನ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನನಗೆ ಹೈಕಮಾಂಡ್ ಮೇಲೆ ಸಂಪೂರ್ಣ ವಿಶ್ವಾಸ ಇದೆ. ಏನೇ ಇದ್ದರೂ ಹೈಕಮಾಂಡ್ ಎಲ್ಲವನ್ನು ತೀರ್ಮಾನ ಮಾಡುತ್ತದೆ. ಹೈಕಮಾಂಡ್ ನಿರ್ಧಾರವೇ ಅಂತಿಮ. ನನಗೆ ದೇವರಾಜ ಅರಸು ದಾರಿಯ ಬಗ್ಗೆ ಅರಿವು ಇರಲಿಲ್ಲ. ಯಾವ ದಾಖಲೆಯನ್ನು ಮುರಿಯಬೇಕು ಎಂಬುವುದು ಗಮನದಲ್ಲಿ ಇರಲಿಲ್ಲ. ಜನರ ಆಶೀರ್ವಾದದಿಂದ ಎಲ್ಲವೂ ನಡೆದ ಹೋಗಿದೆ.
ಇವತ್ತು ದೇವರಾಜ ಅರಸು ದಾಖಲೆ ಸರಿಗಟ್ಟಿದ್ದೇನೆ ಅರಸು ರಾಜಕಾರಣದ ಸಮಯ ಬೇರೆ ಇವತ್ತಿನ ಸಮಯವೇ ಬೇರೆ. ಜನರ ಆಶೀರ್ವಾದದಿಂದ ಅಷ್ಟೇ ನಾನು ಇಲ್ಲಿಯ ತನಕ ಬಂದಿದ್ದೇನೆ. ಇಲ್ಲಿಯವರೆಗಿನ ರಾಜಕೀಯ ನನಗೆ ತೃಪ್ತಿ ಕೊಟ್ಟಿದೆ. ರಾಜ್ಯದ ಜನರಿಗಾಗಿ ನಾನು ಇನ್ನಷ್ಟು ಕೆಲಸ ಮಾಡಬೇಕಿದೆ. ನಾನು ಒಂದು ಬಾರಿ ಎಂಎಲ್ಎ ಆದರೆ ಸಾಕು ಅಂತ ಅಂದುಕೊಂಡಿದ್ದೆ ಆದರೆ ಶಾಸಕ, ಡಿಸಿಎಂ, ಸಿಎಂ ಎಲ್ಲವೂ ಆಗಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಇನ್ನು ಕೆಸಿ ವೇಣುಗೋಪಾಲ್ ಅವರನ್ನು ಭೇಟಿ ಮಾಡಿದ ವಿಚಾರವಾಗಿ ಮೈಸೂರು ಮಾರ್ಗವಾಗಿ ಬೆಂಗಳೂರಿಗೆ ತೆರಳಿ ದೆಹಲಿಗೆ ಹೋಗುತ್ತಿದ್ದರು. ಹೀಗಾಗಿ ವೇಣುಗೋಪಾಲ್ ಅವರನ್ನು ಭೇಟಿಯಾಗಿದ್ದೇನೆ ಅಷ್ಟೇ. ಯಾವ ರಾಜಕಾರಣವು ಚರ್ಚೆ ಆಗಿಲ್ಲ ಸಂಪುಟ ಪುನಾರಚನೆ ಬಗ್ಗೆಯೂ ಅವರ ಬಳಿ ಚರ್ಚೆ ಮಾಡಿಲ್ಲ. ಸಂಪುಟದ ಬಗ್ಗೆ ಯಾವಾಗ ಕರೆಯುತ್ತಾರೆ ಆಗ ದೆಹಲಿಗೆ ಹೋಗುತ್ತೇನೆ. ಬಜೆಟ್ ನಲ್ಲಿ ಏನೇನು ವಿಶೇಷತೆ ಇರುತ್ತೆ ಎಂದು ಅವತ್ತೇ ನೋಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.








