ಬೆಂಗಳೂರು : 2. 42 ಕೋಟಿ ರೂ. ಮೌಲ್ಯದ ಚಿನ್ನ ಖರೀದಿಸಿ ವಂಚನೆ ಮಾಡಿದ್ದ ಆರೋಪದ ಮೇಲೆ ಮಾಜಿ ಸಚಿವ ವರ್ತೂರು ಪ್ರಕಾಶ್ ಆಪ್ತೆಯನ್ನು ಪೊಲೀಸರು ಬಂಧಿಸಿದ್ದಾರೆ.ಬಾಗಲಗುಂಟೆ ನಿವಾಸಿ ಶ್ವೇತಾಗೌಡ ಬಂಧಿತ ಆರೋಪಿ. ಕೆಲ ದಿನಗಳ ಹಿಂದೆ ಅವಿನ್ಯೂ ರಸ್ತೆಯ ನವರತ್ನ ಜ್ಯುವೆಲರ್ಸ್ ಮಳಿಗೆಯಲ್ಲಿ ಗಣ್ಯರ ಹೆಸರು ಬಳಸಿಕೊಂಡು 2.42 ಕೋಟಿ ರೂ.ಮೌಲ್ಯದ ಆಭರಣವನ್ನು ಖರೀದಿಸಿದ್ದಳು. ಆದರೆ ಹಣ ಪಾವತಿಸದೆ ವಂಚಿಸಿದ್ದಳು ಎನ್ನುವ ಆರೋಪ ಕೇಳಿ ಬಂದಿದೆ.
ಇದೀಗ ವಿಚಾರಣೆ ವೇಳೆ ಸ್ಪೋಟಕ ವಾದಂತಹ ಮಾಹಿತಿ ಬಾಯ್ಬಿಟ್ಟಿರುವ ಆರೋಪಿ ಶ್ವೇತಾ, ವರ್ತೂರು ಪ್ರಕಾಶ್ ಹೆಸರಲ್ಲಿ ಉದ್ಯಮಿಗೆ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಶ್ವೇತ ಮೊಬೈಲ್ ನಲ್ಲಿ ಹಲವು ರಾಜಕಾರಣಿಗಳ ಮೊಬೈಲ್ ನಂಬರ್ ಸೇವ್ ಆಗಿದೆ. ಕೋಲಾರದ ರಾಜಕಾರಣಿಗಳು, ಉದ್ಯಮಿಗಳ ನಂಬರ್ ಗಳನ್ನು ಮೈಸೂರು ಪಾಕ್, ರಸಗುಲ್ಲ ಎಂದು ನಂಬರ್ ಸೇವ್ ಮಾಡಿಕೊಂಡಿದ್ದಾಳೆ.
ಸ್ವೀಟ್ಸ್ ಗಳ ಹೆಸರಲ್ಲಿ ರಾಜಕಾರಣಿಗಳು ಮತ್ತು ಉದ್ಯಮಿಗಳ ಹೆಸರು ಸೇವ್ ಮಾಡಿಕೊಂಡಿದ್ದಾಳೆ, ವರ್ತೂರು ಪ್ರಕಾಶ್ ಮನೆಯ ಕೆಲಸದವರ ಜೊತೆಗೆ ಈಕೆ ನಿಕಟವಾದ ಸಂಪರ್ಕ ಹೊಂದಿದ್ದಳು ಎನ್ನಲಾಗಿದ್ದು, ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆಗೆ ಹಾಜರಾಗಲು ಇದೀಗ ವರ್ತೂರು ಪ್ರಕಾಶ್ ಗು ನೋಟಿಸ್ ನೀಡಲಾಗಿದೆ. ಯಲಹಂಕದಲ್ಲಿ ಚಿನ್ನದ ಉದ್ಯಮಿಗೂ ಶ್ವೇತ ವಂಚಿಸಿದ್ದಾಳೆ.
ಪೋಲೀಸರ ವಿಚಾರಣೆ ವೇಲ್w ವರ್ತೂರ್ ಪ್ರಕಾಶ್ ನನಗೆ ಗೊತ್ತು ಎಂದು ಶ್ವೇತ ಹೇಳಿದ್ದಾಳೆ. ಪ್ರಕಾಶ್ ಬಗ್ಗೆ ಕೆಲಸ ಫೋಟೋ ಮಾಹಿತಿ ಬಹಿರಂಗವಾಗಿದ್ದು, ವರ್ತೂರು ಪ್ರಕಾಶ್ ನಿವಾಸಕ್ಕೆ ಚಿನ್ನ ಡೆಲಿವರಿ ಮಾಡಿಸಿಕೊಂಡಿದ್ದಳು. ಡಾಲರ್ಸ್ ಕಾಲೋನಿ ನಿವಾಸಕ್ಕೆ ಚಿನ್ನವನ್ನು ಶ್ವೇತ ತರಿಸಿಕೊಂಡಿದ್ದಾಳೆ. ಹಾಗಾಗಿ ಚಿನ್ನದ ಅಂಗಡಿ ಸಿಬ್ಬಂದಿಗಳು ಶ್ವೇತಾ ಮನೆಗೆ ಚಿನ್ನ ಡೆಲಿವರಿ ಮಾಡಿದ್ದಾರೆ ಆದರೆ ಆಕೆ ನನ್ನ ಸ್ನೇಹಿತೆ ಅಲ್ಲ ಎಂದಿರುವ ವರ್ತೂರು ಪ್ರಕಾಶ್ ಆಕೆ ವ್ಯವಹಾರದ ಬಗ್ಗೆ ಗೊತ್ತಿಲ್ಲ ಎಂದು ಮಾಜಿ ಶಾಸಕ ವರ್ತೂರು ಪ್ರಕಾಶ್ ತಿಳಿಸಿದ್ದಾರೆ.