ನವದೆಹಲಿ: ಆಭರಣ ಪ್ರಿಯರಿಗೆ ಶಾಕಿಂಗ್ ನ್ಯೂಸ್ ಎನ್ನುವಂತೆ ಇಂದು ಒಂದೇ ದಿನಕ್ಕೆ ಚಿನ್ನದ ದರವು 1,580 ರೂ. ಹೆಚ್ಚಳವಾಗಿದೆ. ಆ ಮೂಲಕ ಒಂದೇ ದಿನಕ್ಕೆ ದಾಖಲೆ ಮಟ್ಟದಲ್ಲಿ ಆಭರಣದ ದರವು ಹೆಚ್ಚಳಗೊಂಡಿದೆ.
ಜನವರಿ 5, 2026 ರಂದು 1580 ರೂಪಾಯಿ ಹೆಚ್ಚಳ ಆಗುವ ಮೂಲಕ 10 ಗ್ರಾಂ ಚಿನ್ನದ ಬೆಲೆ 1.37 ಲಕ್ಷ ರೂಪಾಯಿಗೆ ತಲುಪಿದೆ. 24K ಚಿನ್ನದ ಬೆಲೆ 1 ಗ್ರಾಂಗೆ ₹13,740 ಕ್ಕೆ ತಲುಪಿದ್ದು, ಹಿಂದಿನ ಮುಕ್ತಾಯಕ್ಕೆ ಹೋಲಿಸಿದರೆ ₹1,580 ರಷ್ಟು ಏರಿಕೆ ಕಂಡಿದೆ.
ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂ ಒಂದಕ್ಕೆ 13,740 ರೂಪಾಯಿ ಇದ್ದು, ಇಂದು 158 ರೂಪಾಯಿ ಏರಿಕೆ ಆಗಿದೆ. 10 ಗ್ರಾಂ ಶುದ್ಧ ಚಿನ್ನಕ್ಕೆ 1,37,400 ರೂಪಾಯಿ ಇದೆ. 24 ಕ್ಯಾರೆಟ್ 10 ಗ್ರಾಂ ಬೆಲೆಯಲ್ಲಿ ಇಂದು 1580 ರೂಪಾಯಿ ಹೆಚ್ಚಳ ಆಗಿದೆ.
ಭಾರತದ ವಿವಿಧ ನಗರಗಳಲ್ಲಿ ಇಂದಿನ ಚಿನ್ನದ ದರ (ಪ್ರತಿ 1 ಗ್ರಾಂಗೆ)
ಚೆನ್ನೈ (ಅತ್ಯಂತ ದುಬಾರಿ),₹13,833, ₹12,680, ₹10,575
ಮುಂಬೈ / ದೆಹಲಿ,₹13,755, ₹12,610, ₹10,305
ಬೆಂಗಳೂರು / ಹೈದರಾಬಾದ್,₹13,740, ₹12,595, ₹10,305
ಕೇರಳ / ಪುಣೆ,₹13,740, ₹12,595, ₹10,305
ಅಹಮದಾಬಾದ್,₹13,745, ₹12,600, ₹10,310
ಬೆಳ್ಳಿ ಬೆಲೆ ಗಗನಕ್ಕೇರುತ್ತಿದೆ
ಚಿನ್ನದ ದರ ಏರಿಕೆಯಾದಂತೆ ಬೆಳ್ಳಿಯ ಬೆಲೆ ಕೂಡ ಗಗನಕ್ಕೇರುತ್ತಿದೆ. ನಿನ್ನೆಗೆ ಹೋಲಿಸಿದರೆ ಇಂದು ಪ್ರತಿ ಗ್ರಾಂ ಬೆಳ್ಳಿಯ ಮೇಲೆ ₹6 ಏರಿಕೆಯಾಗಿದೆ.
1 ಗ್ರಾಂ ಬೆಳ್ಳಿ: ₹247 (ನಿನ್ನೆ ₹241 ಇತ್ತು)
10 ಗ್ರಾಂ ಬೆಳ್ಳಿ: ₹2,470
100 ಗ್ರಾಂ ಬೆಳ್ಳಿ: ₹24,700
1 ಕೆಜಿ ಬೆಳ್ಳಿ: ₹2,47,000








