ವಿಜಯನಗರ : ರಾಜ್ಯದಲ್ಲಿ ಬಿಚ್ಚಿ ಬೀಳಿಸೋ ಘಟನೆ ಒಂದು ನಡೆದಿದ್ದು ಪುತ್ರನೊಬ್ಬ ತಂದೆ ತಾಯಿ ಮತ್ತು ಆತನ ಸಹೋದರಿಯನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿ ಈ ಒಂದು ಭೀಕರ ಹತ್ಯೆ ನಡೆದಿದೆ.
ತಂದೆ ತಾಯಿ ಮತ್ತು ಸಹೋದರಿ ನಾಪತ್ತೆಯಾಗಿದ್ದಾರೆ ಎಂದು ಬೆಂಗಳೂರಿನ ತಿಲಕನಗರ ಠಾಣೆಗೆ ಪುತ್ರ ಅಕ್ಷಯ್ ಎಂಬಾತ ದೂರ ನೀಡಿದ್ದಾನೆ. ವಿಚಾರಣೆಯ ವೇಳೆ ತಾನೇ ಕೊಂದಿರುವುದಾಗಿ ಮಾಹಿತಿ ನೀಡಿದ್ದಾನೆ. ಅವರನ್ನು ಕೊಂದು ಮನೆಯಲ್ಲಿ ಹೂತು ಹಾಕಿದ್ದಾಗೆ ಒಮ್ಮೆ ಹೇಳಿದರೆ ವಿಜಯನಗರ ಜಿಲ್ಲೆಯ ಕೊಟ್ಟೂರಿನ ಮನೆಯಲ್ಲಿ ಹೂತು ಹಾಕಿದ್ದಾಗೆ ಹೇಳಿಕೆ ನೀಡಿದ್ದಾನೆ ಇನ್ನು ಮತ್ತೊಮ್ಮೆ ಸಂಡೂರಿನಲ್ಲಿ ಶವ ಎಸೆದಿರುವುದಾಗಿ ಹೇಳಿಕೆ ನೀಡಿದ್ದಾನೆ.
ವ್ಯಕ್ತಿ ನೀಡಿದ ಸ್ಪಷ್ಟ ಹೇಳಿಕೆಯ ಬಗ್ಗೆ ಕೊಟ್ಟೂರು ಠಾಣೆಗೆ ಬೆಂಗಳೂರಿನ ತಿಲಕ ನಗರ ಠಾಣೆ ಪೊಲೀಸ್ರು ಮಾಹಿತಿ ನೀಡಿದ್ದಾರೆ. ತಿಲಕ ನಗರ ಠಾಣೆ ಪೋಲಿಸರ ಮಾಹಿತಿ ಆಧರಿಸಿ ಇದೀಗ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಶವಗಳಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.








