ಬೆಳಗಾವಿ : ಬೆಳಗಾವಿಯಲ್ಲಿ ಮನಕಲಕುವ ಘಟನೆ ಒಂದು ನಡೆದಿದ್ದು, ಒಂದೇ ದಿನ ದಂಪತಿ ಸಾವನ್ನಪ್ಪಿದ್ದು, ಮೂವರು ಮಕ್ಕಳು ಅನಾಥರಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಅರವಳ್ಳಿಯಲ್ಲಿ ನಡೆದಿದೆ. ಅರವಳ್ಳಿ ಗ್ರಾಮದ ದಂಪತಿಗಳಾದ ಕರೆಪ್ಪ (36) ಹಾಗೂ ಮಧುರ (30) ಒಂದೇ ದಿನ ಸಾವನ್ನಪ್ಪಿದ್ದಾರೆ.
ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಪತ್ನಿ ಮಧುರ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕ್ರಿಮಿನಾಶಕ ಮಾದರಿ ಸೇವಿಸಿ ಮಧುರ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮಧುರ ಸಾವನಪ್ಪಿದ್ದು, ಪತ್ನಿ ಸಾವಿನ ವಿಚಾರ ತಿಳಿದು ಬೈಕ್ ನಲ್ಲಿ ಬರುತ್ತಿದ್ದ ಪತಿಗೆ ಅಪಘಾತ ಸಂಭವಿಸಿದೆ. ಬಸ್ ಚಕ್ರಕ್ಕೆ ಸಿಲುಕಿದ್ದಾನೆ.
ಈ ಒಂದು ಘಟನೆಯಿಂದ ಗ್ರಾಮದಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಮಧುರ ಹಾಗೂ ಕರಪ್ಪಗೆ ಮೂರು ಮಕ್ಕಳಿದ್ದು, ಸದ್ಯ ತಂದೆ ತಾಯಿಯನ್ನು ಕಳೆದುಕೊಂಡು ಮಕ್ಕಳು ಅನಾಥರಾಗಿದ್ದಾರೆ. ಗ್ರಾಮದಲ್ಲಿ ಶೋಕ ಮಡುಗಟ್ಟಿದೆ. ಒಂದೇ ದಿನ ಪತ್ನಿ ಮತ್ತು ಪತಿ ಸಾವಿನ ಸುದ್ದಿ ತಿಳಿದು ಇಡೀ ಗ್ರಾಮವೇ ಶೋಕದಲ್ಲಿ ಮುಳುಗಿದೆ.








