ಬೆಂಗಳೂರು : ರಾಜ್ಯದಲ್ಲಿ ಬೆಚ್ಚಿ ಬೀಳಿಸುವಂತಹ ಘಟನೆ ಒಂದು ನಡೆದಿದ್ದು ಬೆಂಗಳೂರಿನಲ್ಲಿ ಮಾವನಿಂದಲೇ ಸೊಸೆಗೆ ಲೈಂಗಿಕ ಕಿರುಕುಳ ನೀಡಿರುವ ಹೇಯ ಕೃತ್ಯ ಇದೀಗ ವರದಿಯಾಗಿದೆ. ವಿದ್ಯಾ ಸಂಸ್ಥೆಯ ಮಾಲೀಕನಿಂದಲೇ ಸೊಸೆಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ.
ಹೌದು ಬೆಂಗಳೂರಿನಲ್ಲಿ ವಿದ್ಯಾ ಸಂಸ್ಥೆಯ ಮಾಲೀಕ ತನ್ನ ಸೊಸೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ವಿಚಾರ ಮಗನಿಗೆ ಏನಾದರೂ ತಿಳಿಸಿದರೆ ಕೊಲ್ಲುವುದಾಗಿ ಬೆದರಿಕೆ ಸಹ ಹಾಕಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ. ಸೊಸೆಯ ಸೌಂದರ್ಯದ ಬಗ್ಗೆ ಪತ್ರ ಬರೆದು ಮುಂದೆಯೇ ಮಾವ ಓದುತ್ತಿದ್ದ. ಥಣಿಸಂದ್ರದ ಪ್ರತಿಷ್ಠಿತ ಶಾಲೆಯ ಪ್ರಿನ್ಸಿಪಲ್ ಆಗಿರುವ ಮಹಿಳೆ, ಕಿರುಕುಳ ನೀಡುವ ಮಹಿಳೆಯ ಮಾವ ಕಾವಲ್ ಬೈರಸಂದ್ರದ ಶಾಲೆಯ ಫೌಂಡರ್ ಆಗಿದ್ದಾನೆ.
ಮನೆಯಲ್ಲಿ ಸೊಸೆ ಒಬ್ಬಳೇ ಇದ್ದಾಗ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ನೀನು ಸುಂದರವಾಗಿದ್ದೀಯ ನನ್ನ ಆಸೆ ಈಡೇರಿಸುವೆ ಎಂದು ಕಿರುಕುಳ ನೀಡಿದ್ದಾನೆ. ಶಾಲೆಯ ಕ್ಯಾಬಿನಲ್ಲಿ ಕೂಡ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. ಕೊನೆಯದಾಗಿ ಮಾವನ ಕಿರುಕುಳ ತಾಳದೆ ಪತಿಗೆ ಸಂತ್ರಸ್ತೆ ಮಹಿಳೆ ಎಲ್ಲವನ್ನು ತಿಳಿಸಿದ್ದಾಳೆ. ಮಗ ಬುದ್ಧಿವಾದ ಹೇಳಿದರು ಕೂಡ ಆರೋಪಿ ಕಿರುಕುಳ ಮುಂದುವರಿಸಿದ್ದ. ಇದೀಗ ಮಾವನ ವಿರುದ್ಧ ಇದೀಗ ಸೊಸೆ ಆರ್ ಟಿ ನಗರ ಠಾಣೆಗೆ ದೂರು ನೀಡಿದ್ದಾರೆ.








