ಬಾಗಲಕೋಟೆ : ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಘಟನೆ ಒಂದು ನಡೆದಿದ್ದು 11 ಎಕರೆ ಆಸ್ತಿಗಾಗಿ ಅಜ್ಜಿಯನ್ನೇ ಭೀಕರವಾಗಿ ಆಕೆಯ ಅಣ್ಣನ ಮಕ್ಕಳು ಕೊಲೆ ಮಾಡಿದ್ದಾರೆ. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಜಗಳದಾಳದಲ್ಲಿ ಈ ಒಂದು ಭೀಕರ ಕೊಲೆ ನಡೆದಿದೆ.
ಆಸ್ತಿಗಾಗಿ ದಾನಜ್ಜಿ ಎಂದೇ ಖ್ಯಾತಿಯಾಗಿದ್ದ ಚಂದ್ರವ್ವ ನೀಲಗಿಯನ್ನು ಭೀಕರವಾಗಿ ಕೊಲೆ ಮಾಡಿದ್ದಾರೆ ದಾನಜ್ಜಿ ಎಂದೆ ಹೆಸರಾಗಿದ್ದ ಚಂದ್ರವ್ವ ನೀಲಗಿಯ ಭೀಕರ ಕೊಲೆಯಾಗಿದ್ದು, ಬಾಗಲಕೋಟೆ ಜಿಲ್ಲೆಯಲ್ಲಿ ದಾನಜ್ಜಿಯ ಅಣ್ಣನ ಮಕ್ಕಳು ಈ ಒಂದು ಕೊಲೆ ಮಾಡಿದ್ದಾರೆ. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಜಗದಾಳ ಗ್ರಾಮ ದಾನಜ್ಜಿಯನ್ನು ಕೊಲೆ ಮಾಡಿದ್ದಾರೆ.
ತರಕಾರಿ ಮಾರಿ ಹಲವಾರು ದಾನ ಧರ್ಮ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಅಲ್ಲದೆ ತೇರದಾಳದಾ ಪ್ರಭುಲಿಂಗ ದೇವಸ್ಥಾನಕ್ಕೆ 16 ಲಕ್ಷ ಮೌಲ್ಯದ ಬೆಳ್ಳಿಯ ಬಾಗಿಲು ದಾನ ಮಾಡಿದ್ದು, 3 ಲಕ್ಷ ಹಣದಲ್ಲಿ ಕೊಠಡಿಯನ್ನು ನಿರ್ಮಾಣ ಮಾಡಿದ್ದರು. ದೇವಸ್ಥಾನದ ಬಳಿ 60 ವರ್ಷದಿಂದ ತರಕಾರಿ ಮಾರಾಟ ಮಾಡುತ್ತಿದ್ದರು. 2022 ರಲ್ಲಿ ಪ್ರಭುಲಿಂಗ ದೇವರಿಗೆ 16 ಲಕ್ಷ ಬೆಳ್ಳಿಯ ಬಾಗಿಲು ದಾನ ಮಾಡಿದ್ದರು. ಇದೀಗ ದಾನಜ್ಜಿಯ ಅಣ್ಣನ ಮಕ್ಕಳು 11 ಎಕರೆ ಆಸ್ತಿಗಾಗಿ ಆಕೆಯನ್ನೇ ಭೀಕರವಾಗಿ ಕೊಲೆ ಮಾಡಿದ್ದಾರೆ.








