ತಮಿಳುನಾಡು : ತಮಿಳುನಾಡಿನಲ್ಲಿ ಹೃದಯವಿದ್ರಾವಕ ಘಟನೆ ಒಂದು ನಡೆದಿದ್ದು, ಸಲಿಂಗ ಕಾಮಕ್ಕೆ 5 ತಿಂಗಳ ಮಗುವನ್ನು ಹೆತ್ತ ತಾಯಿಯೇ ಕೊಲೆ ಮಾಡಿರುವ ಘಟನೆ ವರದಿಯಾಗಿದೆ. ತಮಿಳುನಾಡಿನ ಚಿನ್ನ ಹಟ್ಟಿಯಲ್ಲಿ ಈ ಒಂದು ಹೃದಯವಿದ್ರಾವಕ ಘಟನೆ ನಡೆದಿದೆ. ಭಾರತಿ ಮತ್ತು ಸುಮಿತ್ರ ಸಲಿಂಗ ಕಾಮಕ್ಕೆ ಐದು ತಿಂಗಳ ಮಗು ಬಲಿಯಾಗಿದೆ. 26 ವರ್ಷದ ಭಾರತಿಗೆ ಮದುವೆಯಾಗಿ ಎರಡು ಮಕ್ಕಳಿದ್ದಾವೆ. ಆದರೂ 22 ವರ್ಷದ ಸುಮಿತ್ರ ಜೊತೆಗೆ ಭಾರತಿ ಸಲಿಂಗ ಕಾಮ ಹೊಂದಿದ್ದಳು.
ಕಳೆದ ಐದು ತಿಂಗಳ ಹಿಂದೆ ಭಾರತೀ ಗಂಡು ಮಗುವಿಗೆ ಜನ್ಮ ನೀಡಿದಳು. ನಮ್ಮ ಸರಸಕ್ಕೆ ಮಗು ಅಡ್ಡಿಯಾಗುತ್ತಿದೆ ಅಂತ ಸುಮಿತ್ರ ಹೇಳಿದ್ದಳು ಮಗುವನ್ನು ಕೊಲೆ ಮಾಡುವಂತೆ ಭಾರತಿಗೆ ಸುಮಿತ್ರ ಹೇಳಿದ್ದಾಳೆ. ಹಾಗಾಗಿ ಮಗುವನ್ನು ಉಸಿರುಘಟ್ಟಿಸಿ ತಾಯಿ ಭಾರತಿ ಕೊಲೆ ಮಾಡಿದ್ದಾಳೆ. ಹಾಲು ಕುಡಿಯುವಾಗ ನೆತ್ತಿಗೆ ಏರಿ ಮಗು ಸಾವನಪ್ಪಿದೆ ಎಂದು ಕತೆ ಕಟ್ಟಿದ್ದಾಳೆ. ಸುಮಿತ್ರ ಹೇಳಿದ ಮಾತನ್ನು ಕೇಳಿ ತಾವು ಹೆತ್ತ ಮಗುವನ್ನು ಕೊಲೆ ಮಾಡಿದ್ದಾಳೆ.
ಕಳೆದ ನಾಲ್ಕು ವರ್ಷಗಳಿಂದ ಭಾರತಿ ಮತ್ತು ಸುಮಿತ್ರ ಸಲಿಂಗ ಕಾಮದಲ್ಲಿ ತೊಡಗಿದ್ದಾರೆ. ಪತಿ ಕೆಲಸಕ್ಕೆ ಹೋಗುತ್ತಿದ್ದಂತೆ ಲಿಂಗ ಕಾಮ ಶುರುವಾಗುತ್ತಿತ್ತು. ಮಾತನಾಡಲು ಇಬ್ಬರ ಬಳಿಯು ಪ್ರತ್ಯೇಕವಾಗಿ ಮೊಬೈಲ್ ಇದ್ದು ಸ್ನಾನ ಮಾಡುವಾಗ ನಗ್ನ ವಿಡಿಯೋ ಕಾಲ್ ಮಾಡುತ್ತಿದ್ದರು. ಎದೆಯ ಮೇಲೆ ಭಾರತಿ ಸುಮಿ ಎಂದು ಟ್ಯಾಟೂ ಕೂಡ ಹಾಕಿಸಿಕೊಂಡಿದ್ದಾಳೆ. ಇಬ್ಬರು ಕಿಸ್ ಮಾಡುತ್ತಾ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ ಇಬ್ಬರು ಪರಸ್ಪರ ಚಾಕುವಿನಿಂದ ಕೈಯನ್ನು ಸಹ ಕೊಯ್ದುಕೊಂಡಿದ್ದರು ಎಂದು ತಿಳಿದು ಬಂದಿದೆ.ಅಲ್ಲದೆ ಕಿಸ್ ಮಾಡುತ್ತಾ ಫೋಟೋ ತೆಗೆದುಕೊಂಡು ರಿಲ್ಸ್ ಕೂಡ ಮಾಡಿದ್ದಾರೆ. ಇವರಿಬ್ಬರ ಕಾಮದಾಟಕ್ಕೆ ಐದು ತಿಂಗಳ ಹಸು-ಗುಸು ಬಲಿಯಾಗಿರುವುದು ದುರಂತ.








