ಹುಬ್ಬಳ್ಳಿ : ಗಣೇಶ ವಿಸರ್ಜನೆ ವೇಳೆ ರಾಜ್ಯದಲ್ಲಿ ಹಲವಡೆ ಅಹಿತಕರ ಘಟನೆ ನಡೆದಿದ್ದು ಇದೀಗ ಹುಬ್ಬಳ್ಳಿಯಲ್ಲಿ ಗಣೇಶ ವಿಸರ್ಜನೆಯ ವೇಳೆ ವ್ಯಕ್ತಿಗೆ ಚಾಕು ಇರಿಯಲಾಗಿದೆ. ಹುಬ್ಬಳ್ಳಿಯ ಕೊಪ್ಪೀಕರ ರಸ್ತೆಯಲ್ಲಿ ನಿನ್ನೆ ರಾತ್ರಿ ಒಂದು ಘಟನೆ ನಡೆದಿದ್ದು ಪ್ರತಾಪ್ ಅಲಿಯಾಸ್ ಚೇತನ ಗೌಡರ (32) ಗೆ ಚಾಕು ಇರಿಲಾಗಿದೆ.
ಹುಬ್ಬಳ್ಳಿ ತಾಲೂಕಿನ ಬಿಡನಾಳ ಮಾರುತಿ ನಗರದ ನಿವಾಸಿ ಪ್ರತಾಪ್ ಗೌಡ ಎಂದು ತಿಳಿದು ಬಂದಿದ್ದು, ಸೋನಿಯಾ ಗಾಂಧಿನಗರದ ಶಿರಿ ಹಾಗೂ ಇನ್ನಿಬ್ಬರಿಂದ ಕೃತ್ಯ ಎಸಗಿರುವ ಆರೋಪ ಕೇಳಿ ಬಂದಿದೆ. ಗಣೇಶ ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಪ್ರತಾಪ್ ಗೆ ಚಾಕು ಇರಿದಿದ್ದಾರೆ. ಮೂತ್ರ ವಿಸರ್ಜನೆಗೆ ಎಂದು ಹೋಗುತ್ತಿದ್ದಾಗ ಏಕಾಏಕಿ ಚಾಕು ಇರಿಯಲಾಗಿದೆ.
ಟ್ರಾನ್ಸ್ಪೋರ್ಟ್ ಕಂಪನಿ ಒಂದರಲ್ಲಿ ಪ್ರತಾಪ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಕಳೆದ ಒಂದು ತಿಂಗಳ ಹಿಂದೆ ಅಷ್ಟೇ ಪ್ರತಾಪ್ ಮದುವೆಯಾಗಿದ್ದಾನೆ. ಖಾಸಗಿ ಆಸ್ಪತ್ರೆಗೆ ದಾಖಲಿಸಿ ಪ್ರತಾಪ್ ಗೆ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಶಶಿಕುಮಾರ್ ಭೇಟಿ ನೀಡಿದ್ದಾರೆ ಹುಬ್ಬಳ್ಳಿಯ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.