ಧಾರವಾಡ : ನಮ್ಮ ಭಾರತದ ಹಿಂದೂ ಸಂಪ್ರದಾಯದಲ್ಲಿ ಅತ್ತಿಗೆಗೆ ತಾಯಿಯ ಸ್ಥಾನ ನೀಡಲಾಗಿದೆ. ಆದರೆ ಇತ್ತೀಚಿಗೆ ದಿನಗಳಲ್ಲಿ ಅಂತೂ ಯಾವುದೇ ಸಂಬಂಧಕ್ಕೂ ಕೂಡ ಬೆಲೆ ಇಲ್ಲದಂತಾಗಿದೆ. ಇದೀಗ ವ್ಯಕ್ತಿಯೊಬ್ಬ, ಅಣ್ಣನ ಹೆಂಡತಿ ಮೇಲೆ ಕಣ್ಣಾಗಿದ್ದು, ಲೈಂಗಿಕವಾಗಿ ಸಹಕರಿಸುವಂತೆ ಕರೆದಿದ್ದಾನೆ. ಆದ್ರೆ, ಇದಕ್ಕೆ ನಿರಾಕರಿಸಿದ ಅತ್ತಿಗೆ ಮೇಲೆ ಮೈದುನ ಎಲ್ಲೆಂದರಲ್ಲಿ ಕಚ್ಚಿ ಮೃಗೀಯ ವರ್ತನೆ ತೋರಿದ್ದಾನೆ. ಈ ಘಟನೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಹೊಸ ಕಟ್ಟಿ ಗ್ರಾಮದಲ್ಲಿ ನಡೆದಿದೆ.
ಹೌದು ಅತ್ತಿಗೆ ಮೇಲೆ ಹಲ್ಲೆ ಮಾಡಿ ಕಚ್ಚಿ ಗಾಯಗೋಳಿಸಿರುವ ಕಾಮುಕನನ್ನು ಹೊಸಕಟ್ಟಿ ನಿವಾಸಿ ರಮೇಶ್ ಮೇಗುಂಡಿಗೆ ಎಂದು ತಿಳಿದುಬಂದಿದೆ. ರಮೇಶನಿಗೆ ಈಗಾಗಲೇ ಮದುವೆಯಾಗಿದೆ.ಮದುವೆಯಾದರೂ ಅಣ್ಣನ ಹೆಂಡತಿ ಮೇಲೆ ಕಣ್ಣು ಹಾಕಿದ್ದ. ಅಣ್ಣನ ಹೆಂಡತಿ ಇದು ಸರಿ ಅಲ್ಲ ಅಂದರೂ ಕೇಳಿರಲಿಲ್ಲ.ನೀನೇ ಬೇಕೇ ಬೇಕು ಎಂದು ಪಟ್ಟು ಹಿಡದಿದ್ದ. ಅತ್ತಿಗೆಯನ್ನ ಮಂಚಕ್ಕೆ ಕರೆದವ ಕಾಮುಕನಂತೆ ವರ್ತಿಸಿದ್ದಾನೆ.
ಸ್ವಂತ ಅತ್ತಿಗೆಯನ್ನ ರಮೇಶ್ ಮಂಚಕ್ಕೆ ಕರೆದಿದ್ದಾನೆ. ಆದ್ರೆ, ಇದಕ್ಕೆ ಅತ್ತಿಗೆ ಸವಿತಾ ಬಸಪ್ಪ ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ರಮೇಶ್, ಅತ್ತಿಗೆಯನ್ನು ಹಿಡಿದುಕೊಂಡು ಎಲ್ಲೆಂದರಲ್ಲಿ ಕಚ್ಚಿದ್ದಾನೆ. ಮುಖ, ಎದೆ ಭಾಗ , ಗಲ್ಲಕ್ಕೆ ಕಚ್ಚಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಬಳಿಕ ಮೈದುನನಿಂದ ತಪ್ಪಿಸಿಕೊಂಡು ಮನೆಯಿಂದ ಕೈಗಾಡಿಕೊಂಡು ಹೊರಗೆ ಬಂದಿದ್ದಾಳೆ. ಆಗ ಅಕ್ಕಪಕ್ಕದ ಜನರು ಏನಾಯ್ತು ಎಂದು ಓಡೋಡಿ ಬಂದಿದ್ದು, ಗಾಯಗೊಂಡಿದ್ದ ಸವಿತಾಳನ್ನ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.