ಬೆಂಗಳೂರು : ಬೆಂಗಳೂರಲ್ಲಿ ಮನಕಲಕುವ ಘಟನೆಯೊಂದು ನಡೆದಿದ್ದು, ಮಗು ಸತ್ತಿದ್ದಕ್ಕೆ ತಾಯಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಚಂದ್ರಾ ಲೇಔಟ್ ನಲ್ಲಿ ನಡೆದಿದೆ. ಹೌದು ಬಚ್ಚಲು ಮನೆಯ ನೀರಿನ ಬಕೆಟ್ ನಲ್ಲಿ ಮುಳುಗಿ ಮಗು ಸಾವನ್ನಪ್ಪಿದೆ. ಮಗುವಿನ ಸಾವು ಕಂಡು ತಾಯಿ ಪ್ರತಿಭಾ (29) ಕೂಡ ನೇಣಿಗೆ ಶರಣಾಗಿದ್ದಾರೆ.
ಚಂದ್ರಾ ಲೇಔಟ್ ಠಾಣೆಯ ಭೈರವೇಶ್ವರ ನಗರದಲ್ಲಿ ನಡೆದಿದೆ. 11 ತಿಂಗಳ ಗಂಡು ಮಗು ಅಗಸ್ತ್ಯ ಬಕೆಟ್ ನೀರಲ್ಲಿ ಮುಳುಗಿ ಸಾವನ್ನಪ್ಪಿದೆ. ತಾಯಿ ಮಗ ಇಬ್ಬರೆ ಮನೆಯಲ್ಲಿ ಇದ್ದಾಗ ಘಟನೆ ನಡೆದಿದೆ. ಗಂಡ ಮಹಾಂತೇಶ್ ಕೆಲಸದ ನಿಮಿತ್ತ ಬೇರೆ ಕಡೆಗೆ ಹೋಗಿದ್ದರು. ಪ್ರತಿಭಾ ಹಾಗು ಮಹಾಂತೇಶ್ ಸಾಫ್ಟ್ ವೆರ್ ಉದ್ಯೋಗಿಯಾಗಿದ್ರು. ಮಗು ಸಾವು ಕಂಡು ಪ್ರತಿಭಾ ಕೂಡ ಸಾವನ್ನಪ್ಪಿದ್ದು ದೃಢವಾಗಿದೆ.
ಪಕ್ಕದಲ್ಲಿ ಪ್ರತಿಭಾ ಬರೆದಿಟ್ಟ ಡೆತ್ ನೋಟ್ ಕೂಡ ಪತ್ತೆಯಾಗಿದೆ. ಪಕ್ಕದಲ್ಲೇ 15 ಮಾತ್ರೆ ಶೀಟ್ ಇತ್ತು. ಅದನ್ನ ನೋಡಿ ಪತಿ ಶಾಕ್ ಆಗಿದ್ದಾರೆ. ನಾನು ಬಟ್ಟೆ ತರಲು ಹೋದಾಗ ಈ ಘಟನೆ ನಡೆದಿದೆ. ಹಾಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಬರೆದಿದ್ದಾರೆ. ಮೊದಲಿಗೆ ಮಾತ್ರೆ ನುಂಗಿ ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನ ಮಾಡಿದ್ದಾರೆ. ರಕ್ತ ಬಾರದ ಹಿನ್ನೆಲೆ ನೇಣಿಗೆ ಶರಣಾಗಿದ್ದಾರೆ.








