ಬೆಂಗಳೂರು : ಬೆಂಗಳೂರು ಮಹಿಳೆಯರಿಗೆ ಸೇಫ್ ಅಲ್ಲ ಎನ್ನುವುದಕ್ಕೆ ಇದೀಗ ಮತ್ತೊಂದು ಘಟನೆ ಸಾಕ್ಷಿಯಾಗಿದೆ.ಹೌದು ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಮೈಲಸಂದ್ರದಲ್ಲಿ ಇಂದು ಹಾಡಹಗಲೇ ಗಾಂಜಾ ಮತ್ತಲ್ಲಿ ಇದಂತಹ ಐದರಿಂದ ಆರು ಜನರ ಪುಂಡರು ಯುವತಿಗೆ ಮೈ ಕೈ ಮುಟ್ಟಿ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ವರದಿಯಾಗಿದೆ.
ಹೌದು ಬೆಂಗಳೂರಲ್ಲಿ ನಶೆ ಏರಿಸಿಕೊಂಡು ಯುವಕರು ಅಟ್ಟಹಾಸ ಮೆರೆದಿದ್ದಾರೆ. ಹಾಡಹಗಲೇ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಅಂಗಡಿಗೆ ಹೋಗುತ್ತಿದ್ದ ಯುವತಿಯನ್ನು ಅಡಗಟ್ಟಿ ಹಲ್ಲೆ ಮಾಡಿದ್ದಾರೆ. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಮೈಲಸಂದ್ರ ಬಳಿಯ ರೇಣುಕಾ ಯಲ್ಲಮ್ಮ ಬಡಾವಣೆಯಲ್ಲಿ ಒಂದು ಕೃತ್ಯ ನಡೆದಿದೆ.
ಗಾಂಜಾ ಮತ್ತು ಎಣ್ಣೆ ನಶೆಯಲ್ಲಿದ್ದ ಐದರಿಂದ ಆರು ಪುಂಡರ ಗ್ಯಾಂಗ್ ನಿಂದ ಈ ಕೃತ್ಯ ಎಸಲಾಗಿದೆ. ನಡು ರಸ್ತೆಯಲ್ಲಿಯೇ ಯುವತಿಯ ಮೈ ಮತ್ತು ಕೈಯನ್ನು ಮುಟ್ಟಿ ಲೈಂಗಿಕ ದೌರ್ಜನ್ಯ ಎಸಿಗಿದ್ದಾರೆ. ಪ್ರತಿರೋಧ ವ್ಯಕ್ತಪಡಿಸಿದ ಯುವತಿಯ ಮೇಲೆ ಭೀಕರವಾಗಿ ಹಲ್ಲೆ ಮಾಡಿದ್ದಾರೆ. ಇವಳೇ ಯುವತಿ ಪುಂಡರಿಗೂ ಕೂಡ ಕಾಲಿಂದ ಒದ್ದಿದ್ದಾಳೆ. ಪ್ರತಿರೋಧ ತೋರಿದ್ದಾಳೆ.
ತಕ್ಷಣ ಅಲ್ಲಿಯೇ ಯುವತಿ ಮನೆ ಒಂದರಲ್ಲಿ ಹೋಗಿ ಸೇರಿಕೊಂಡಿದ್ದಾಳೆ. ಆದರೂ ಆ ಒಂದು ಗಾಂಜಾ ನಶೆಯಲ್ಲಿದ್ದಂತಹ ಗ್ಯಾಂಗ್ ಮನೆಗೆ ನುಗ್ಗಿ ಮನೆಯವರಿಗೂ ಅವಾಜ್ ಹಾಕಿದ್ದಾರೆ ಎಂದು ಯುವತಿ ತಿಳಿಸಿದ್ದಾಳೆ. ಈ ಕುರಿತು ಯುವತಿ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಆರು ಪುಂಡರ ವಿರುದ್ಧ FIR ದಾಖಲಾಗಿದೆ.