ಬೆಂಗಳೂರು : ರಾಜ್ಯದಲ್ಲಿ ಜಾತಿಗಣತಿಗೆ ಹಾಜರಾಗದ ಶಿಕ್ಷಕನಿಗೆ ರಾಜ್ಯ ಸರ್ಕಾರ ಬಿಗ್ ಶಾಕ್ ನೀಡಿದ್ದು, ಅಮಾನತು ಮಾಡಿ ಮಹತ್ವದ ಆದೇಶ ಹೊರಡಿಸಲಾಗಿದೆ.
ರಂಗನಾಥ್ ಎಂ. ಕ್ಷೇತ್ರ ಸಮನ್ವಯಾಧಿಕಾರಿಗಳು ಬಿ.ಆರ್.ಸಿ ಕೇಂದ್ರ, ಹೊಸನಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ ಇವರನ್ನು ಕರ್ತವ್ಯಲೋಪ ಹಿನ್ನೆಲೆಯಲ್ಲಿ ಸರ್ಕಾರಿ ಸೇವೆಯಿಂದ ಅಮಾನತ್ತು ಮಾಡಿ ಆದೇಶ ಹೊರಡಿಸಲಾಗಿದೆ.
ಪ್ರಸ್ತಾವನೆ- ಉಲ್ಲೇಖ(1)ರ ಸರ್ಕಾರದ ಆದೇಶದಂತೆ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಕಾರ್ಯವು ಪ್ರಗತಿಯಲ್ಲಿರುತ್ತದೆ. ಹೊಸನಗರ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹುದ್ದೆ ಖಾಲಿ ಇರುವುದರಿಂದ ಸದರಿ ಹುದ್ದೆಯಲ್ಲಿ ಶ್ರೀಮತಿ ಚೇತನ, ಮುಖ್ಯ ಶಿಕ್ಷಕರು ಪ್ರಭಾರದಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆ. ಶ್ರೀ ರಂಗನಾಥ್ ಎಂ. ಕ್ಷೇತ್ರ ಸಮನ್ವಯಾಧಿಕಾರಿಗಳು, ಬಿ.ಆರ್.ಸಿ ಕೇಂದ್ರ, ಹೊಸನಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ ಇವರನ್ನು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯಕ್ಕೆ ನೋಡಲ್ ಅಧಿಕಾರಿಯನ್ನಾಗಿ ಉಲ್ಲೇಖ (2)ರಂತೆ ನೇಮಿಸಲಾಗಿರುತ್ತದೆ.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಕಾರ್ಯದಲ್ಲಿ Shadow arca ಗಳಿಗೆ ಮೇಲ್ವಿಚಾರಕರ ಹಾಗೂ ಗಣತಿದಾರರ ನೇಮಕ ಮಾಡುವ ಕಾರ್ಯವನ್ನು ಶ್ರೀ ರಂಗನಾಥ್ ಎಂ. ಕ್ಷೇತ್ರ ಸಮನ್ವಯಾಧಿಕಾರಿಗಳು ಇವರಿಗೆ ನಿರ್ವಹಿಸಲು ಸೂಚಿಸಿದ್ದರೂ ಸಹ ಮೇಲಾಧಿಕಾರಿಗಳ ಅಧಿಕೃತ ಪೂರ್ವಾನುಮತಿಯನ್ನು ಪಡೆಯದೇ ರಜೆ ಅರ್ಜಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಟಪಾಲು ವಿಭಾಗಕ್ಕೆ ನೀಡಿ ತೆರಳಿದ್ದು, ದೂರವಾಣಿ ಕರೆಗೂ ಸ್ಪಂದಿಸದೇ ಉದ್ದಟತನದಿಂದ ವರ್ತಿಸಿರುವುದರಿಂದ ಸದರಿಯವರಿಗೆ ತಹಶೀಲ್ದಾರ್, ಹೊಸನಗರ ತಾಲ್ಲೂಕು ಇವರು ಉಲ್ಲೇಖ(3)ರಂತೆ ಕಾರಣ ಕೇಳಿ ತಿಳುವಳಿಕೆಯನ್ನು ಜಾರಿಗೊಳಿಸಿರುತ್ತಾರೆ.
ಸದರಿ ಸಮೀಕ್ಷೆಗೆ Shadow arca ದಲ್ಲಿ ಗಣತಿದಾರರಾಗಿ ಶಿಕ್ಷಕರುಗಳನ್ನು ನೇಮಕ ಮಾಡಲು ಬಾಕಿ ಇದ್ದು, ಶ್ರೀ ರಂಗನಾಥ್ ಎಂ. ಕ್ಷೇತ್ರ ಸಮನ್ವಯಾಧಿಕಾರಿಗಳು ಇವರು ಅನಧಿಕೃತವಾಗಿ ಗೈರು ಹಾಜರಾಗಿರುವುದರಿಂದ Shadow area ದಲ್ಲಿ ಶಿಕ್ಷಕರುಗಳನ್ನು ಗಣತಿದಾರರಾಗಿ ನೇಮಕ ಮಾಡಲು ಸಾಧ್ಯವಾಗಿರುವುದಿಲ್ಲ. ಮೇಲ್ವಿಚಾರಕರ ಹಾಗೂ ಗಣತಿದಾರರ ನೇಮಕ ಮಾಡುವಲ್ಲಿ ಹಲವು ಗೊಂದಲಗಳಾಗಿದ್ದು, ಸದರಿ ನೌಕರರು ಮೇಲಾಧಿಕಾರಿಗಳ ದೂರವಾಣಿ ಕರೆಗೂ ಸ್ಪಂದಿಸದೇ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಕಾರ್ಯದಲ್ಲಿ ಹೊಸನಗರ ತಾಲ್ಲೂಕಿನ ಪ್ರಗತಿ ಕುಂಠಿತವಾಗಲು ನೇರವಾಗಿ ಕಾರಣರಾಗಿರುತ್ತಾರೆ ಮತ್ತು ಕಾರಣಕೇಳಿ ತಿಳುವಳಿಕೆಗೆ 24 ಗಂಟೆಯೊಳಗೆ ಲಿಖಿತ ಸಮಜಾಯಿಷಿ ಸಲ್ಲಿಸುವಂತೆ ಸೂಚಿಸಿದ್ದರೂ ಸಹ ಸದರಿಯವರು ಯಾವುದೇ ಉತ್ತರವನ್ನು ಸಲ್ಲಿಸಿರುವುದಿಲ್ಲ. ಆದ್ದರಿಂದ ಸದರಿ ನೌಕರರ ವಿರುದ್ಧ ನಿಯಮಾನುಸಾರ ಶಿಸ್ತು ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್, ಹೊಸನಗರ ತಾಲ್ಲೂಕು ಇವರು ಉಲ್ಲೇಖ (4)ರಂತೆ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.
ದಿನಾಂಕ:22.09.2025 ರಿಂದ ರಾಜ್ಯದ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ದಾಖಲಿಸಲು ಒಂದು ಹೊಸ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಕೈಗೊಂಡಿದೆ. ಈ ಸಮೀಕ್ಷೆಯು ರಾಜ್ಯದ ಎಲ್ಲಾ ನಾಗರೀಕರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ನಿಖರವಾದ ದತ್ತಾಂಶಗಳನ್ನು ಸಂಗ್ರಹಿಸುವ ಗುರಿಯನ್ನು ಹೊಂದಿದ್ದು, ದಿನಾಂಕ:07.10.2025 ರೊಳಗಾಗಿ ಮುಕ್ತಾಯಗೊಳಿಸಬೇಕಾಗಿರುತ್ತದೆ. ಪ್ರಯುಕ್ತ, ತಹಶೀಲ್ದಾರ್. ಹೊಸನಗರ ರವರ ಪ್ರಸ್ತಾವನೆಯನ್ನು ಪರಿಶೀಲಿಸಿರುವಂತೆ, ನೌಕರರು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಕಾರ್ಯಗಳಿಗೆ ತೊಂದರೆಯನ್ನುಂಟು ಮಾಡಿರುವುದು ಮತ್ತು ಸರ್ಕಾರಿ ಸೇವೆಯಲ್ಲಿ ಉದ್ದಟತನದಿಂದ ವರ್ತಿಸಿ ಸರ್ಕಾರಿ ಸೇವೆಯಲ್ಲಿ ನಿರ್ಲಕ್ಷ್ಯತನ ತೋರಿರುವುದು. ಅಲ್ಲದೇ ಮೇಲಾಧಿಕಾರಿಯವರ ಆದೇಶವನ್ನು ನಿರ್ವಹಿಸದೇ ಬೇಜವಬ್ದಾರಿತನ ತೋರಿಸಿರುವ ಆರೋಪವು ಮೇಲ್ನೋಟಕ್ಕೆ ಸಾಮಾನ್ಯವಾದ ಆರೋಪವಾಗಿರದೇ ಕರ್ನಾಟಕ red đa (d) 2 20215 2-3(1) (i)(ii)(iii), (2) (i)(iii)(iv), (5) (ix)(x), (6) (1) 4 (7) ನ್ನು ಸ್ಪಷ್ಟವಾಗಿ ಉಲ್ಲಂಘಿಸಿರುವುನ್ನು ಗಂಭೀರವಾಗಿ ಪರಿಗಣಿಸಿ, ನೌಕರರ ವಿರುದ್ಧ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ನೌಕರರನ್ನು ಸೇವೆಯಿಂದ ಅಮಾನತ್ತುಗೊಳಿಸುವುದು ಸೂಕ್ತವೆಂಬುದನ್ನು ಪರಿಗಣಿಸಿ. ಈ ಕೆಳಕಂಡ ಆದೇಶವನ್ನು ಹೊರಡಿಸಲಾಗಿದೆ.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ, ಶ್ರೀ ರಂಗನಾಥ್ ಎಂ. ಕ್ಷೇತ್ರ ಸಮನ್ವಯಾಧಿಕಾರಿಗಳು, ಬಿ.ಆರ್.ಸಿ.. ಹೊಸನಗರ ತಾಲ್ಲೂಕು ರವರ ವಿರುದ್ದ ಮಾಡಿರುವ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿ ಗುರುದತ್ತ ಹೆಗಡೆ, ಭಾ.ಆ.ಸೇ… ಜಿಲ್ಲಾಧಿಕಾರಿ, ಶಿವಮೊಗ್ಗ ಜಿಲ್ಲೆ ಆದ ನಾನು ಕರ್ನಾಟಕ ನಾಗರಿಕ ಸೇವಾ (ವರ್ಗಿಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಗಳು, 1957ರ ನಿಯಮ-10(1 (ಡಿ) ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಸದರಿ ನೌಕರರನ್ನು ಸೇವೆಯಿಂದ ಅಮಾನತ್ತಿನಲ್ಲಿರಿಸಿ ಆದೇಶಿಸಿರುತ್ತೇನೆ.
ನೌಕರರು ಅಮಾನತ್ತಿನ ಅವಧಿಯಲ್ಲಿ ಸಕ್ರಮ ಪ್ರಾಧಿಕಾರಿಯವರ ಪೂರ್ವಾನುಮತಿ ಪಡೆಯದೇ ಕೇಂದ್ರ ಸ್ಥಾನವನ್ನು ಬಿಡತಕ್ಕದ್ದಲ್ಲ ಮತ್ತು ನೌಕರರು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿ, 1957ರ ನಿಯಮ 8 ರನ್ವಯ ನಿಲಂಬನ ಭತ್ಯೆ ಪಡೆಯಲು ಅರ್ಹರಿರುತ್ತಾರೆ.