ಹುಬ್ಬಳ್ಳಿ : ಯಲ್ಲಾಪುರ ಕ್ಷೇತ್ರದ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಸೇರಿದಂತೆ ಇನ್ನೂ ಬಹಳಷ್ಟು ಜನರು ಕಾಂಗ್ರೆಸ್ ಪಕ್ಷಕ್ಕೆ ಬರಲಿದ್ದಾರೆ ಎಂದು ಹುಬ್ಬಳ್ಳಿಯಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೊಸ ಬಾಂಬ್ ಸಿಡಿಸಿದ್ದಾರೆ.
BREAKING : ಶೀಘ್ರದಲ್ಲಿ ‘ರಾಜಕೀಯ ತರಬೇತಿ’ ಕೇಂದ್ರ ಆರಂಭಿಸಲು ಚಿಂತನೆ : ಸ್ಪೀಕರ್ ಯುಟಿ ಖಾದರ್
ಹುಬ್ಬಳ್ಳಿಯ ಏರ್ಪೋರ್ಟ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನೂ ಬಹಳ ಜನ ಕಾಂಗ್ರೆಸ್ ಗೆ ಬರಲಿದ್ದಾರೆ. ಯಾರೆಲ್ಲಾ ಬರ್ತಾರೆ ಎಂಬ ಗುಟ್ಟು ಬಿಟ್ಟುಕೊಡಲು ಆಗುವುದಿಲ್ಲ ಎಂದು ಹುಬ್ಬಳ್ಳಿಯಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದರು.
‘ಫೇಸ್ಬುಕ್’, ‘ಇನ್ಸ್ಟಾಗ್ರಾಮ್’ ಜಾಗತಿಕ ಸ್ಥಗಿತ: ಜುಕರ್ಬರ್ಗ್ ಕಳೆದುಕೊಂಡಿದ್ದೆಷ್ಟು ?
ಇದೆ ವೇಳೆ ಶಿವರಾಮ್ ಹೆಬ್ಬಾರ್ ಗೆ ಕಾಂಗ್ರೆಸ್ ಸ್ವಾಗತ ಮಾಡಿರುವ ವಿಚಾರವಾಗಿ ಮಾತನಾಡಿದ ಅವರು ನಿಮಗೂ ಕೂಡ ಸ್ವಾಗತ ಮಾಡುತ್ತೇವೆ. ಅವರಷ್ಟೇ ಅಲ್ಲ ಇನ್ನು ಬಹಳ ಜನ ಕಾಂಗ್ರೆಸ್ ಗೆ ಬರುತ್ತಾರೆ.ಸ್ಥಳೀಯ ಮಟ್ಟದಲ್ಲೂ ಕಾರ್ಯಕರ್ತರಿಗೂ ಈ ಕುರಿತಂತೆ ಸೂಚನೆ ನೀಡಲಾಗಿದೆ.ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಿ ಎಂದು ಕಾರ್ಯಕರ್ತರಿಗೆ ಈಗಾಗಲೇ ಸೂಚಿಸಿದ್ದೇನೆ ಎಂದು ತಿಳಿಸಿದರು.
‘ಡಿಕೆ ಶಿವಕುಮಾರ್’ ಮುಂದಿನ ‘ಸಿಎಂ’ :ಹುಬ್ಬಳ್ಳಿಯಲ್ಲಿ ಘೋಷಣೆ ಕೂಗಿದ ಕಾಂಗ್ರೆಸ್ ಕಾರ್ಯಕರ್ತರು
ಇದೆ ವೇಳೆ ಹುಬ್ಬಳ್ಳಿಯ ಏರ್ಪೋರ್ಟ್ ನಲ್ಲಿ ಡಿಕೆ ಶಿವಕುಮಾರ್ ಆಗಮಿಸುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಎಂದು ಘೋಷಣೆ ಕೂಗಿರುವ ಘಟನೆ ಜರುಗಿತು.