ಶಿವಮೊಗ್ಗ : ಬಂಧಿಸಲು ತೆರಳಿದ್ದ ವೇಳೆ ರೌಡಿಶೀಟರ್ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಸಮನೆ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಗುಂಡಿನ ದಾಳಿ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಸಮನೆ ಠಾಣೆ ರೌಡಿ ರವಿ ಅಲಿಯಾಸ್ ಗುಂಡನ ಕಾಲಿಗೆ ಪೊಲೀಸರು ಫೈರಿಂಗ್ ನಡೆಸಿದ್ದಾರೆ. ವಿವಿಧ ಕೇಸ್ ಗಳಲ್ಲಿ ರೌಡಿಶೀಟರ್ ರವಿ ಬೇಕಾಗಿದ್ದ ಹೊಸಮನೆ ಠಾಣೆಯ ಪಿಎಸ್ಐ ಕೃಷ್ಣ ರವಿ ಕಾಲಿಗೆ ಫೈರಿಂಗ್ ಮಾಡಿದ್ದಾರೆ.
ಬಂಧಿಸಲು ಹೋದಾಗ ಸಿಬ್ಬಂದಿ ಮೇಲೆ ರವಿ ಹಲ್ಲೆಗೆ ಯತ್ನಿಸಿದ್ದಾನೆ. ಕಾನ್ಸ್ಟೇಬಲ್ ಆದರ್ಶ ಮೇಲೆ ದಾಳಿ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಪಿಎಸ್ಐ ಕೃಷ್ಣ ಅವರು ಆತ್ಮ ರಕ್ಷಣೆಗಾಗಿ ರವಿ ಕಾಲಿಗೆ ಗುಂಡು ಹಾರಿಸಿದ್ದಾರೆ. ರೌಡಿ ಶೀಟರ್ ಮತ್ತು ಕಾನ್ಸ್ಟೇಬಲ್ ಅನ್ನು ಸದ್ಯ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.