ಶಿವಮೊಗ್ಗ:ಅಕ್ರಮವಾಗಿ ಕೆರೆ ಹೂಳು ತೆಗೆದು ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದ್ದು ಇದರ ಬಗ್ಗೆ ವರದಿ ಸಲ್ಲಿಸಲು ವಿಳಂಬ ಮಾಡಿದ್ದಕ್ಕಾಗಿ ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಸಿಇಒ ಬಂಧನಕ್ಕೆ ಕರ್ನಾಟಕ ಭೂಕಬಳಿಕೆ ನಿಷೇಧ ನ್ಯಾಯಾಲಯ ಆದೇಶ ನೀಡಿದೆ.
ಶಿವಮೊಗ್ಗ ತಾಲೂಕಿನ ಅಬ್ಬಲಗೆರೆ ಗ್ರಾಮದಲ್ಲಿ ಅಕ್ರಮವಾಗಿ ಕೆರೆ ಹೂಳು ತೆಗೆದ ಆರೋಪ ಸಿಇಒ ವಿರುದ್ಧ ಕೇಳಿ ಬಂದಿತ್ತು.ಇದರಿಂದ ಸರಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂ. ನಷ್ಟ ಅಂದರೆ ಸರಕಾರದ ಬೊಕ್ಕಸಕ್ಕೆ 71.45 ಲಕ್ಷ ರೂ. ನಷ್ಟ ಆಗಿದೆ.ಹೀಗಾಗಿ ಇದರ ಬಗ್ಗೆ ವರದಿ ಸಲ್ಲಿಸಲು ಶಿವಮೊಗ್ಗ ಜಿ.ಪಂ. ಸಿಇಒ ವಿಳಂಬ ಮಾಡಿದ್ದರು. ಹಿನ್ನೆಲೆ ಬಂಧನಕ್ಕೆ ಕೋರ್ಟ್ ಆದೇಶ ನೀಡಿದೆ.
ಫೆ.16 ರಂದು ನ್ಯಾಯಾಲಯಕ್ಕೆ ಹಾಜರಾಗಬೇಕು. 25 ಸಾವಿರ ರೂ. ದಂಡ ಕಟ್ಟುವಂತೆ ನ್ಯಾಯಾಲಯ ಆದೇಶ ಹೊರಡಿಸಿದೆ.
ಖಾಸಗಿ ಲೇಔಟ್ ನಿರ್ಮಾಣಕ್ಕೆ 500 ಲೋಡ್ ಮಣ್ಣು ತೆಗೆಯಲು ಅನುಮತಿ ಪಡೆದು 15 ಸಾವಿರ ಲೋಡ್ ಮಣ್ಣು ಸಾಗಾಣೆ ಮಾಡಲಾದ ಆರೋಪ ಕೇಳಿ ಬಂದಿತ್ತು.