ಶಿವಮೊಗ್ಗ : ಶಿವಮೊಗ್ಗದಲ್ಲಿ ಘೋರವಾದ ದುರಂತ ಸಂಭವಿಸಿದ್ದು, ಭದ್ರಾ ಜಲಾಶಯದ ಹಿನ್ನೀರಿಗೆ ತೆರಳಿದ್ದ ಬಾಲಕ ಕಾಲು ಜಾರಿ ಬಿದ್ದು ಸಾವಿಗೀಡಾದ ಘಟನೆ ಭದ್ರಾವತಿ ತಾಲೂಕಿನ ಬಿಆರ್‌ಪಿ ಜಲಾಶಯದಲ್ಲಿ ನಡೆದಿದೆ. ಆದರೆ ಬಾಲಕನನ್ನು ರಕ್ಷಿಸಲು ಹೋಗಿದ್ದ ವ್ಯಕ್ತಿಯೋರ್ವ ನಾಪತ್ತೆಯಾಗಿದ್ದಾನೆ.
ಬಾಲಕನ ಶವ ಪತ್ತೆಯಾಗಿದ್ದು, ಬಾಲಕನನ್ನು ರಕ್ಷಿಸಲು ಹೋಗಿದ್ದ ವ್ಯಕ್ತಿ ನಾಪತ್ತೆಯಾಗಿದ್ದಾನೆ. ರಜೆ ಇದ್ದಿದ್ದರಿಂದ ಜಲಾಶಯವನ್ನು ವೀಕ್ಷಿಸಲು ಕುಟುಂಬದೊಂದಿಗೆ ತೆರಳಿದ್ದರು. ಈ ವೇಳೆ ಈ ಅವಘಡ ಸಂಭವಿಸಿದೆ.ಈ ವೇಳೆ ಬಾಲಕನವನ್ನು ರಕ್ಷಿಸಲು ಹೋಗಿದ್ದ ವ್ಯಕ್ತಿ ಕೂಡ ನಾಪತ್ತೆಯಾಗಿದ್ದು, ಆತನ ಪತ್ತೆಗಾಗಿ ಶೋಧ ಕಾರ್ಯ ಮುಂದುವರೆದಿದೆ.