ತುಮಕೂರು : ರಾಜ್ಯ ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ಮಾಡಿದ್ದು ಅದರಲ್ಲಿ ಮಹಿಳೆಯರಿಗೆ ಎಂದೆ ಗೃಹಲಕ್ಷ್ಮಿ ಹಾಗೂ ಶಕ್ತಿ ಯೋಜನೆ ಎಂಬ ಎರಡು ಯೋಜನೆಗಳು ಬಹಳ ಪ್ರಮುಖ ಯೋಜನೆಗಳಾಗಿವೆ. ಇದೀಗ ಶಕ್ತಿ ಯೋಜನೆಯಲ್ಲಿ ನಿನ್ನೆ ತಾನೇ 500 ಕೋಟಿ ಮಹಿಳೆಯರು ಉಚಿತ ಬಸ್ ಪ್ರಯಾಣ ಯೋಜನೆ ಪಡೆದಿದ್ದಾರೆ. ಸಿಎಂ ಸಿದ್ದರಾಮಯ್ಯ ಸ್ವತಹ ಬಸ್ ನಲ್ಲಿ ನಿಂತು ಟಿಕೆಟ್ ನೀಡಿದ್ದಾರೆ.
ಇದೀಗ ತುಮಕೂರಲ್ಲಿ ಶಕ್ತಿ ಯೋಜನೆಯ ಪರಿಣಾಮದಿಂದಾಗಿ ಬಸ್ನಲ್ಲಿ ರಶ್ ಹೆಚ್ಚಾಗಿ ಮಹಿಳೆಯರಗಳು ಉಸಿರು ಕಟ್ಟಿ ಕಾಪಾಡಿ ಕಾಪಾಡಿ ಎಂದು ಕೂಗಿ ಕೊಂಡಿರುವ ಘಟನೆ ನಡೆದಿದೆ. ಮಹಿಳಾ ಪ್ರಯಾಣಿಕರಿಗಾಗಿ ಸರ್ಕಾರ ನೀಡಿರುವ ಫ್ರೀ ಬಸ್ ಯೋಜನೆ ಹಲವು ಫಜೀತಿ ಸೃಷ್ಟಿ ಮಾಡುತ್ತಿದೆ. ಮೈಸೂರಿನಿಂದ ತುಮಕೂರಿಗೆ ಸಂಚರಿಸುತ್ತಿದ್ದ ಬಸ್‌ನಲ್ಲಿ ಮಹಿಳೆಯೊಬ್ಬರು ಉಸಿರುಗಟ್ಟಿ ಕಿರುಚಾಡಿದ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ಪಟ್ಟಣದಲ್ಲಿ ನಡೆದಿದೆ.
ಅತಿಯಾದ ಜನಸಂದಣಿಯಲ್ಲಿ ಬಸ್‌ನೊಳಗೆ ಉಂಟಾದ ತೀವ್ರ ನೂಕಾಟ-ತಳ್ಳಾಟದಿಂದ ಮಹಿಳೆಯೊಬ್ಬರಿಗೆ ಉಸಿರಾಡಲು ತೀವ್ರ ತೊಂದರೆ ಉಂಟಾಗಿದೆ. ನನ್ನನ್ನು ಕಾಪಾಡಿ, ಬಸ್ಸಿನಿಂದ ಕೆಳಗಿಳಿಸಿ ಎಂದು ಜೋರಾಗಿ ಮಹಿಳಾ ಪ್ರಯಾಣಿಕರೊಬ್ಬರು ಕೂಗಿಕೊಂಡಿದ್ದಾರೆ. ತಕ್ಷಣವೇ ಬಸ್ಸು ನಿಲ್ಲಿಸಿದ ನಿರ್ವಾಹಕರು ಮಹಿಳೆಯನ್ನು ಕೆಳಗಿಳಿಸಿದ್ದಾರೆ.ಈ ಬಸ್ ಮೈಸೂರು ತುಮಕೂರು ಮಾರ್ಗದಲ್ಲಿ ಸಂಚರಿಸುತ್ತಿತ್ತು. ಗೌಡಗೆರೆ ಚಾಮುಂಡೇಶ್ವರಿ ದೇವಾಲಯಕ್ಕೆ ಹೋಗಿದ್ದ ಮಹಿಳಾ ತಂಡ ಈ ಬಸ್ಸಿನಲ್ಲಿ ಹೋಗುತ್ತಿದ್ದ ವೇಳೆ ಘಟನೆ ನಡೆದಿದೆ.