ಶಿವಮೊಗ್ಗ : ಮೆಡಿಕಲ್ ಕಾಲೇಜಿನ ಪಿಜಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಗಳ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಸಹ ಪ್ರಾಧ್ಯಾಪಕ ಹಾಗೂ ಶಸ್ತ್ರ ಚಿಕಿತ್ಸೆಕನಾಗಿ ಕಾರ್ಯನಿರ್ವಹಿಸುತ್ತಿದ್ದ ವೈದ್ಯ ಅಶ್ವಿನ್ ಅನ್ನು ಅರೆಸ್ಟ್ ಮಾಡಲಾಗಿದೆ. ಬೆಂಗಳೂರಿನಲ್ಲಿ ಡಾ.ಅಶ್ವಿನ್ ಹೆಬ್ಬಾರ್ ನನ್ನು ಮಹಿಳಾ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಲೈಂಗಿಕ ಕಿರುಕುಳ ಮತ್ತು ಜಾತಿ ನಿಂದನೆ ಕೇಸ್ ನಲ್ಲಿ ಡಾ. ಅಶ್ವಿನ್ ಅರೆಸ್ಟ್ ಆಗಿದ್ದಾರೆ.ಲೈಂಗಿಕ ಕಿರುಕುಳ ಪ್ರಕರಣ ಸಿಮ್ಸ್ ಕಾಲೇಜಿನಲ್ಲಿ ಭಾರಿ ಸಂಚಲನ ಮೂಡಿಸಿತ್ತು. ಜೂನ್ 20ರಂದು ಶಿವಮೊಗ್ಗದ ಮೆಡಿಕಲ್ ವಿದ್ಯಾರ್ಥಿನಿ ಮೇಲೆ ಲೈಂಗಿಕ ಕಿರುಕುಳ ಕುರಿತಂತೆ ವಿದ್ಯಾರ್ಥಿನಿ ಮಹಿಳಾ ಠಾಣೆಗೆ ದೂರು ನೀಡಿದ್ದಳು.
ಅಲ್ಲದೆ ಕಾಲೇಜು ವಿದ್ಯಾರ್ಥಿಗಳು ಎರಡು ದಿನ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ಮಾಡಿದ್ದರು. ಸಂಘ ಸಂಸ್ಥೆಗಳು ಆರೋಪಿಯ ಬಂದನಕ್ಕೆ ಗಡುಗು ಸಹ ನೀಡಿದ್ದವು ಇದೀಗ ಬೆಂಗಳೂರಿನಲ್ಲಿ ಇಂದು ಡಾ. ಅಶ್ವಿನ್ ಅನ್ನು ಮಹಿಳಾ ಪೊಲೀಸ್ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ.