ಬೆಂಗಳೂರು : ವಸತಿ ಯೋಜನೆ ಅಡಿಯಲ್ಲಿ ಮನೆ ಹಂಚಿಕೆಯಲ್ಲಿ ರಂಚ ಪಡೆದಿರುವ ಆರೋಪದ ಕುರಿತಂತೆ ಕಲ್ಬುರ್ಗಿ ಜಿಲ್ಲೆಯ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಆರ್ ಪಾಟೀಲ್ ಹಾಗೂ ಸಚಿವ ಜಮೀರ್ ಅಹ್ಮದ್ ಕಾರ್ಯದರ್ಶಿಯಾಗಿರುವ ಸರ್ಫರಾಜ್ ಖಾನ್ ಮಾತನಾಡಿರುವ ಆಡಿಯೋ ಬಗ್ಗೆ ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ. ನೈಜ ಹೋರಾಟಗಾರರ ವೇದಿಕೆ ಅಧ್ಯಕ್ಷ HM ವೆಂಕಟೇಶ್ ಅವರು ಈ ಕುರಿತು ದೂರು ನೀಡಿದ್ದಾರೆ.
ಲಂಚ ಕೊಟ್ಟರೆ ನಿವೇಶನ ಕೊಡುವುದಾಗಿ ಮಾತನಾಡಿದ್ದಾರೆ. ಲೋಕಾಯುಕ್ತರು ಸುಮೋಟೋ ಕೇಸ್ ದಾಖಲಿಸಿಕೊಳ್ಳಬೇಕಿತ್ತು. ಜನರ ತೆರಿಗೆ ಹಣವನ್ನು ಇವರು ಬಳಸಿಕೊಂಡು ವಂಚನೆ ಮಾಡಿದ್ದಾರೆ. ಸರ್ಫರಾಜ್ ಖಾನ್ ಜಮೀರ್ ಆಪ್ತ ಕಾರ್ಯದರ್ಶಿಯಾಗಿದ್ದಾರೆ.
ರಾಜೀವ್ ಗಾಂಧಿ ವಸತಿ ಯೋಜನೆಯ ಅಡಿ ಮನೆಗಳನ್ನು ಹಂಚಬೇಕಿತ್ತು.
ದುರ್ಬಲರಿಗೆ ಹಂಚಿಕೆಯಾಗಬೇಕಿದ್ದ ಮನೆಗಳಿಗೆ ಹಣ ಪಡೆಯುತ್ತಿದ್ದಾರೆ. ಮನೆಗಳ ಹಂಚಿಕೆಗೆ ಪ್ರತಿ ಮನೆಗೆ ಹತ್ತು ಸಾವಿರ ಹಣ ಪಡೆಯಲಾಗಿದೆ. ಬಿ ಆರ್ ಪಾಟೀಲ್, ಸರ್ಪರಾಜ್ ಮಾತನಾಡಿರುವುದರಲ್ಲಿ ಸತ್ಯಾಂಶ ಇರಬಹುದು. ಹಾಗಾಗಿ ಆಡಿಯೋ ಇಟ್ಟುಕೊಂಡು ತನಿಖೆ ನಡೆಸುವಂತೆ HM ವೆಂಕಟೇಶ್ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.