ಬೆಂಗಳೂರು : ಹಾಸನದಲ್ಲಿ ಸರಣಿ ಹೃದಯಾಘಾತದಿಂದ ಸಾವನಪ್ಪಿರುವ ಹಿನ್ನೆಲೆಯಲ್ಲಿ ಸರ್ಕಾರ ತನಿಖೆಗೆ ಆದೇಶ ನೀಡಿ ತಂಡ ರಚನೆ ಮಾಡಿತ್ತು. ಇದೀಗ ತಜ್ಞರು ವರದಿಯಲ್ಲಿ ಸಡನ್ ಆಗಿ ಎಷ್ಟು ಮಂದಿ ಸತ್ತಿದ್ದಾರೆ? ಮೇ ಜೂನ್ ನಲ್ಲಿ ಒಟ್ಟು 24 ಜನರು ಸತ್ತಿದ್ದಾರೆ. 24 ಮಂದಿ ಪೈಕಿ 20 ಜನರಿಗೆ ಹೃದಯಾಘಾತ ಕನ್ಫರ್ಮ್ ಆಗಿದೆ. ನಾಲ್ವರಿಗೆ ಹೃದಯಘಾತವೇ ಆಗಿಲ್ಲ ಎಂದು ವರದಿಯಾಗಿದೆ.
ನಾಲ್ವರಲ್ಲಿ ಒಬ್ಬನಿಗೆ ಕಿಡ್ನಿ ಸಮಸ್ಯೆ ಮತ್ತು ಮತ್ತೊಬ್ಬರಿಗೆ ಆಕ್ಸಿಡೆಂಟ್ ಆಗಿದೆ. ಇನ್ನೊಬ್ಬ ವ್ಯಕ್ತಿಗೆ ಸಿವಿಯರ್ ಗ್ಯಾಸ್ ಟ್ರೊ ಸಮಸ್ಯೆಯಿಂದ ಬಿಪಿ ಸಮಸ್ಯೆ ಉಂಟಾಗಿದೆ. ಇನ್ನೂ ನಾಲ್ಕನೇ ವ್ಯಕ್ತಿಗೆ ಇತರ ಆರೋಗ್ಯ ಸಮಸ್ಯೆಯಿಂದ ಸಾವನ್ನಪ್ಪಿದ್ದಾನೆ. ಹಾಸನದಲ್ಲಿ ಹೃದಯಾಘಾತ ಸರಣಿ ಸಾವು ಹಿನ್ನೆಲೆಯಲ್ಲಿ ತಜ್ಞರು ಸಮಿತಿ ಸಿದ್ದ ಪಡಿಸಿದೆ.
ಇನ್ನು 20 ಪ್ರಕರಣಗಳಲ್ಲಿ 3 ನಾನ್ ಹಾರ್ಟ್ ಅಟ್ಯಾಕ್ ಡೆತ್ ಆಗಿದ್ದು ಮೂವರಿಗೆ ಈಗಾಗಲೇ ಒಮ್ಮೆ ಹೃದಯಘಾತವಾಗಿತ್ತು. ಇನ್ನೊಬ್ಬನಿಗೆ ಆಂಜಿಯೋಪ್ಲಾಸ್ಟ್ ಮಾಡಲಾಗಿತ್ತು. ಒಟ್ಟು ಏಳು ಹೃದಯಾಘಾತ ಪ್ರಕರಣಗಳ ಪೋಸ್ಟ್ ಮಾರಾಟ ಮಾಡಲಾಗಿತ್ತು. 7 ಮರಣೋತ್ತರ ಪರೀಕ್ಷೆಗಳಲ್ಲಿ ಒಂದು ರಿಪೋರ್ಟ್ ಮಾತ್ರ ಬಾಕಿ ಇದೆ.
ಈಗಾಗಲೇ ಆರು ಮರಣೋತ್ತರ ಪರೀಕ್ಷೆಗಳ ವರದಿ ಬಂದಿದೆ ಎಂದು ತಜ್ಞರು ಸಂಗ್ರಹಿಸಿದ ವರದಿಯಲ್ಲಿ ತಿಳಿದು ಬಂದಿದೆ. ಆರು ಜನರ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಶಾಂಕಿಂಗ್ ಅಂಶ ವರದಿ ಬಂದಿದ್ದು, 5 ಜನರಿಗೆ ಸಡನ್ ಕಾರ್ಡಿಯಾಕ್ ಅರೆಸ್ಟ್ ಆಗಿದೆ. ಹೃದಯದಲ್ಲಿ ಬ್ಲಡ್ ಕ್ಲಾರ್ಟ್ ಆಗಿ ಇವರು ಮೃತಪಟ್ಟಿದ್ದಾರೆ. ಈ ಆರು ಪ್ರಕರಣಗಳಲ್ಲಿ ಹೆಂಗ್ ಸಡನ್ ಡೆತ್ ಸಹ ವರದಿಯಾಗಿದೆ.