ಬೆಂಗಳೂರು : ರಾಜ್ಯದಲ್ಲಿ ಸರಣಿ ಹೃದಯಾಘಾತ ಸಾವು ಸಂಭವಿಸುತ್ತಿದ್ದು ರಾಜ್ಯ ಸರ್ಕಾರ ಇತ್ತೀಚಿಗೆ ತಾಂತ್ರಿಕ ಸಲಹಾ ಸಮಿತಿ ಒಂದನ್ನು ರಚನೆ ಮಾಡಿದ್ದು ಹೃದಯಾಘಾತದಿಂದ ಸಾವನ್ನಪ್ಪಿರುವವರ ಕುರಿತು ಸಂಪೂರ್ಣ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರ ತನಿಖಾ ತಂಡಕ್ಕೆ ಸೂಚನೆ ನೀಡಿತ್ತು. ಇದೀಗ ತನಿಖೆ ಪೂರ್ಣಗೊಳಿಸಿರುವ ತಂಡ ಎಂದು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದೆ..
ಹೌದು ರಾಜ್ಯ ಸರ್ಕಾರಕ್ಕೆ ಇಂದು ಹೃದಯಘಾತದ ವರದಿ ಸಲಿಕೆ ಆಗಿದೆ. ಹಾಸನ ಜಿಲ್ಲೆಯಲ್ಲಿನ ಸರಣಿ ಹೃದಯಾಘಾತದ ರಿಪೋರ್ಟ್ ಸಲ್ಲಿಕೆಯಾಗಿದ್ದು, ಮೂರು ಹಂತದ ತನಿಖಾ ವರದಿ ತನಿಖಾ ತಂಡ ಸಲ್ಲಿಸಿದೆ. ಬೆಂಗಳೂರಿನ ಜಯದೇವ ಆಸ್ಪತ್ರೆಗೆ ತನಿಖಾ ತಂಡ ಆಗಮಿಸಿದ್ದು, ಅಂತಿಮ ವರದಿಯನ್ನು ವಿಮರ್ಶೆ ನಡೆಸಿ, ವಿಮರ್ಶೆ ಮಾಡಿದ ಬಳಿಕ ಆರೋಗ್ಯ ಸಚಿವರಿಗೆ ವರದಿ ಸಲ್ಲಿಕೆ ಮಾಡಲಾಯಿತು. ವರದಿ ಸಲ್ಲಿಕೆ ಆದ ನಂತರ ಸಚಿವ ದಿನೇಶ್ ಗುಂಡೂರಾವ್ ಸುದ್ದಿಗೋಷ್ಠಿ ನಡೆಸಲಿದ್ದಾರೆ.
3 ಮಾದರಿ ಯಾವವು?
ಮಾದರಿ 1ರಲ್ಲಿ ಮರಣೋತ್ತರ ಪರೀಕ್ಷೆ ಯಾಗಿರುವ ಪ್ರಕರಣಗಳ ವರದಿ ಇರಲಿದ್ದು, ಮಾದರಿ 2 ರಲ್ಲಿ ಇಸಿಜಿ ಮತ್ತು ಬ್ಲಡ್ ಚೆಕ್ ಮಾಡಿಸಿರುವ ಆಧಾರದಲ್ಲಿ ವರದಿ ತಯಾರಿಸಲಾಗಿದೆ. ಇನ್ನು 3ನೇ ವರದಿಯಲ್ಲಿ ಮಾರ್ಗ ಮಧ್ಯದಲ್ಲಿ ಹಿಸ್ಟರಿ ಆಧಾರದ ಮೇಲೆ ವರದಿ ತಯಾರಿಸಲಾಗಿದೆ. ಸಾವನ್ನಪ್ಪಿದವರ ಮನೆಗಳಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದು 50 ಪ್ರಶ್ನೆಗಳು ನೀಡಿ ಮಾಹಿತಿ ಸಂಗ್ರಹಿಸಲಾಗಿದೆ.
ಹಾಸನದಲ್ಲಿ ಇದುವರೆಗೂ 41 ಜನರು ಹೃದ್ಯ ಘಾತಕ್ಕೆ ಬಲಿಯಾಗಿದ್ದಾರೆ ಮೇ 20ರಿಂದ ಜುಲೈ 7ರವರೆಗೆ ಒಟ್ಟು 41 ಜನರು ಸಾವನ್ನಪ್ಪಿದ್ದಾರೆ. 24 ಕುಟುಂಬಗಳಿಂದ ಜಿಲ್ಲಾ ಆರೋಗ್ಯ ಅಧಿಕಾರಿ ಮಾಹಿತಿ ಸಂಗ್ರಹಿಸಿದ್ದಾರೆ. ಕಳೆದ 12 ದಿನಗಳಿಂದ ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸಿದ್ದಾರೆ. ಮೃತರ ಪೋಷಕರು ಮತ್ತು ಸಂಬಂಧಿಕರಿಂದ ಮಾಹಿತಿ ಸಂಗ್ರಹಿಸಲಾಗಿದ್ದು, ಹಠಾತ್ ಸಾವಿಗೀಡಾದವರ ಮರಣೋತ್ತರ ಪರೀಕ್ಷೆ ವರದಿ, ಮೃತಪಟ್ಟವರ ಹಿನ್ನೆಲೆ ಆರೋಗ್ಯ ಸ್ಥಿತಿ ಮಾಹಿತಿ ಸಂಗ್ರಹಿಸಿದ್ದಾರೆ. ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ.