ಬೆಂಗಳೂರು : ಬೆಂಗಳೂರು ಉತ್ತರ ತಾಲೂಕಿನ ಬಾಗಲೂರಿನಲ್ಲಿ ಸರಣಿ ಅಪಘಾತವನ್ನು ಸಂಭವಿಸಿದೆ. ಬ್ರೇಕ್ ಫೇಲ್ ಆಗಿ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಲಾರಿ ನುಗ್ಗಿದೆ. ಲಾರಿ ನುಗ್ಗಿದ ರಭಸಕ್ಕೆ ಎರಡು ಕಾರು 3 ಬೈಕುಗಳು ಜಖಂಗೊಂಡಿವೆ.
ಕಾರಿನಲ್ಲಿದ್ದವರು ಮತ್ತು ಬೈಕ್ ಸವಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಏರ್ಪೋರ್ಟಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಈ ಒಂದು ಅಪಘಾತ ಸಂಭವಿಸಿದೆ. ಲೋಡ್ ತುಂಬಿಕೊಂಡು ಬರುವಾಗ ಏಕಾಏಕಿ ಲಾರಿಯ ಬ್ರೇಕ್ ಫೇಲ್ ಆಗಿದೆ. ಘಟನೆಯಲ್ಲಿ ಸಣ್ಣಪುಟ್ಟ ಗಾಯಗೊಂಡವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.








