ಬೆಂಗಳೂರು : ರಾಜ್ಯದಲ್ಲಿ 20 ಲಕ್ಷ ಜನ ಸಮುದಾಯದವರು ಇದ್ದಾರೆ ಬೆಳಗಾವಿ ಭಾಗದಲ್ಲಿ ಹೆಚ್ಚಿನ ಜನಸಂಖ್ಯೆಯಲ್ಲಿ ಜೈನ ಸಮುದಾಯದವರು ಇದ್ದಾರೆ ಸಿಎಂ ಬಳಿ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆಗೆ ಬೇಡಿಕೆ ಇಡಲಾಗಿದೆ ಆದಷ್ಟು ಬೇಗ ಘೋಷಣೆ ಮಾಡಲಾಗುವುದು ಎಂದು ವಿಧಾನಸಭೆಯಲ್ಲಿ ಉಚಿತ ಜಮೀರ್ ಅಹ್ಮದ್ ತಿಳಿಸಿದರು.
ವಿಧಾನಸೌಧದಲ್ಲಿ ಅಥಣಿ ಶಾಸಕ ಲಕ್ಷ್ಮಣ ಸೌದಿ ಅವರು, ಜೈನ ಸಮುದಾಯಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿ. ಕಾಂಗ್ರೆಸ್ ಪಕ್ಷಕ್ಕೆ ಹಸ್ತದ ಗುರುತು ಕೊಟ್ಟಿದ್ದು ಜೈನ ಸಮುದಾಯ. ಆ ಋಣ ಕಾಂಗ್ರೆಸ್ ನವರಾದ ನಮ್ಮ ಮೇಲಿದೆ. ಆದಷ್ಟು ಬೇಗ ಆ ಋಣ ತೀರಿಸೋಣ ರೇಣ ಸಮುದಾಯಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮದ ಅಗತ್ಯ ಇದೆ. ಪ್ರತ್ಯೇಕ ಅಭಿವೃದ್ಧಿ ನಿಗಮ ಮತ್ತು ಹಾಸ್ಟೆಲ್ ಯಾವಾಗ ಘೋಷಣೆ ಮಾಡ್ತೀರಾ ಎಂದು ಲಕ್ಷ್ಮಣ ಸವದಿ ಪ್ರಶ್ನಿಸಿದರು.
ಇದಕ್ಕೆ ಸಚಿವ ಜಮೀರ್ ಅಹ್ಮದ್ ಉತ್ತರಿಸಿ ರಾಜ್ಯದಲ್ಲಿ 20 ಲಕ್ಷ ಜನ ಸಮುದಾಯದವರು ಇದ್ದಾರೆ. ಬೆಳಗಾವಿ ಭಾಗದಲ್ಲಿ ಹೆಚ್ಚಿನ ಜನಸಂಖ್ಯೆಯಲ್ಲಿ ಜೈನ ಸಮುದಾಯದವರು ಇದ್ದಾರೆ. ಸಿಎಂ ಬಳಿ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆಗೆ ಬೇಡಿಕೆ ಇಡಲಾಗಿದೆ ಆದಷ್ಟು ಬೇಗ ಘೋಷಣೆ ಮಾಡಲಾಗುವುದು ಎಂದು ವಿಧಾನಸಭೆಯಲ್ಲಿ ಸಚಿವ ಜಮೀರ್ ಅಹ್ಮದ್ ತಿಳಿಸಿದರು.