ಬೆಂಗಳೂರು : ಬೆಂಗಳೂರಲ್ಲಿ ಜುವೆಲ್ಲರೀ ಶಾಪ್ ಒಂದರ ಮಾಲೀಕರ ಮೆನೆಯ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ನೇಪಾಳ ಮೂಲದ ವ್ಯಕ್ತಿ ಒಬ್ಬ ಮಾಲೀಕರು ಇಲ್ಲದ ಸಮಯದಲ್ಲಿ ಉಂಡ ಮನೆಗೆ ಕನ್ನ ಹಾಕಿದ್ದು ಮನೆಯಲ್ಲಿದ್ದ ಸುಮಾರು 15 ಕೋಟಿಗೂ ಅಧಿಕ ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿರುವ ಘಟನೆ ಬೆಂಗಳೂರಿನ ವಿಜಯನಗರದಲ್ಲಿ ನಡೆದಿದೆ.
ಹೌದು ವಿಜಯನಗರದ ಹೊಸಹಳ್ಳಿ ಎಕ್ಸ್‌ಟೆನ್ಸನ್ ನಿವಾಸಿ ಸುರೇಂದ್ರ ಕುಮಾರ್‌ಜೈನ್ ಅವರ ಮನೆಯಲ್ಲಿ ಈ ಕೃತ್ಯ ನಡೆದಿದೆ. ದೂರುದಾರ ಸುರೇಂದ್ರ ಕುಮಾರ್ ಜೈನ್ ಮಾಗಡಿ ರಸ್ತೆಯ ವಿದ್ಯಾರಣ್ಯ ನಗರದಲ್ಲಿ ಸುಮಾರು 30 ವರ್ಷಗಳಿಂದ ಅರಿಹಂತ್ ಜ್ಯುವೆಲ್ಲರಿ ಅಂಗಡಿ ಹೊಂದಿದ್ದಾರೆ.ನೇಪಾಳ ಮೂಲದ ನಮ್ರಾಜ್‌ಗೆ ಮನೆ ಇಲ್ಲದ ಕಾರಣ ಮಾಲೀಕ ಸುರೇಂದ್ರ ಕುಮಾರ್‌ಜೈನ್ ಅವರ ಮನೆಯ ಪಾರ್ಕಿಂಗ್ ಸ್ಥಳದಲ್ಲಿರುವ ಸೆಕ್ಯೂರಿಟಿ ರೂಮ್‌ನಲ್ಲಿ 6 ತಿಂಗಳಿನಿಂದ ಪತ್ನಿ ಜತೆಗೆ ವಾಸವಿದ್ದ.
ಮಾಲೀಕ ಸುರೇಂದ್ರ ಕುಮಾರ್‌ಜೈನ್ ದೇವರ ಜಾತ್ರೆ ಪ್ರಯುಕ್ತ ನ.1ರಂದು ಕುಟುಂಬದ ಜತೆ ಗುಜರಾತ್‌ಗೆ ತೆರಳಿದ್ದರು. ಜಾತ್ರೆ ಮುಗಿಸಿ ನ.7ರಂದು ಮುಂಜಾನೆ ಮನೆಗೆ ವಾಪಾಸಾದಾಗ ಮನೆಯಲ್ಲಿದ್ದ ನಗದು, ಚಿನ್ನಾಭರಣ, ಚಿನ್ನದ ಬಿಸ್ಕತ್ ಸೇರಿ ಒಟ್ಟು ಸುಮಾರು ₹15.15 ಕೋಟಿ ಮೌಲ್ಯದ ಮೌಲ್ಯದ ವಸ್ತುಗಳು ಕಳುವಾಗಿರುವುದು ಕಂಡು ಬಂದಿದೆ.
15 ಕೋಟಿ ಮೌಲ್ಯದ ಚಿನ್ನಾಭರಣ ಕಳುವು ಆದಾಗ ಸುರೇಂದ್ರ ಕುಮಾರ್ ಆತಂಕಕ್ಕೆ ಒಳಗಾಗಿ ಹೊರಗಡೆ ಬಂದು ಸೆಕ್ಯೂರಿಟಿ ಗಾರ್ಡನ್ನು ಹುಡುಕಾಡಿದ್ದಾರೆ. ಆದರೆ ಸೆಕ್ಯೂರಿಟಿ ಗಾರ್ಡ್ ಚಿನ್ನಾಭರಣ ಹಾಗೂ ಪತ್ನಿ ಸಮೇತ ಪರಾರಿಯಾಗಿದ್ದಾನೆ. ಈ ಕುರಿತು ಕೂಡಲೇ ಅವರು ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇದೀಗ ಆರೋಪಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.