ಬೆಂಗಳೂರು : ಪ್ರಚಾರದ ವೇಳೆ ಗನ್ ಇಟ್ಟುಕೊಂಡಿದ್ದ ಅಪರಿಚಿತ ವ್ಯಕ್ತಿಯಿಂದ ಸಿಎಂ ಸಿದ್ದರಾಮಯ್ಯಗೆ ಹಾರ ಹಾಕಿರುವ ಘಟನೆ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಸೌಮ್ಯ ರೆಡ್ಡಿ ಪರ ಪ್ರಚಾರ ವೇಳೆ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಸೊಂಟದಲ್ಲಿ ಗನ್ ಇಟ್ಟುಕೊಂಡು ಬಂದು ಕ್ಯಾಂಟರ್ ಏರಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಹಾರ ಹಾಕಿದ್ದಾನೆ. ಸಿಎಂ ಸಿದ್ದರಾಮಯ್ಯಗೆ ಹಾರ ಹಾಕಿ ನಂತರ ಅಪರಿಚಿತ ವ್ಯಕ್ತಿ ಅಲ್ಲಿಂದ ತೆರಳಿದ್ದಾನೆ ಎಂದು ಹೇಳಲಾಗುತ್ತಿದೆ. ಆತನ ಬಳಿ ಲೈಸೆನ್ಚ್ ಇತ್ತ? ಸಿಎಂ ಗೆ ಹಾರ ಹಾಕಿದ ವ್ಯಕ್ತಿ ಯಾರು? ಇದರ ಬಗ್ಗೆಯೂ ಸಿಎಂ ಬೆಂಗಾವಲು ಪಡೆ ಹಾಗೂ ಪೊಲೀಸರಿಗೆ ಮಾಹಿತಿ ಇಲ್ಲ.
ಸಿಎಂ ಮತಯಾಚನೆಗಳೇ ಇದು ಪೊಲೀಸರ ಭದ್ರತಾ ವೈಫಲ್ಯವಾಗಿದೆ ಎಂದು ಹೇಳಲಾಗುತ್ತಿದೆ. ಗನ್ ಇಟ್ಟುಕೊಂಡಿದ್ದವನು ಸಿಎಂ ಸಿದ್ದರಾಮಯ್ಯ ಬಳಿ ಹೇಗೆ ಹೋಗುತ್ತಾನೆ? ಲೈಸೆನ್ಸ್ ಹೊಂದಿದ ವ್ಯಕ್ತಿಯಾಗಿದ್ದರು ಏಕಾಏಕಿ ಸಿಯಂಬಳಿ ಹೋಗಬಹುದಾ? ಎನ್ನುವ ಪ್ರಶ್ನೆ ಇದೀಗ ಕಾಣತೊಡಗಿದೆ.