ಕಣ್ಣೂರು : ಶಾಲಾ ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ಕಣ್ಣೂರಿನಲ್ಲಿ ನಡೆದಿದೆ. ಇಂದು ಸಂಜೆ 4.30ರ ಸುಮಾರಿಗೆ ವಳಕ್ಕೈನಲ್ಲಿ ಅಪಘಾತ ಸಂಭವಿಸಿದ್ದು, ಬಸ್ ಚಿನ್ಮಯ ವಿದ್ಯಾಲಯ ಶಾಲೆಗೆ ಸೇರಿದೆ. ಮೃತ ಮಗುವನ್ನ ನೇದ್ಯ ಎಸ್ ರಾಜೇಶ್ ಎಂದು ಗುರುತಿಸಲಾಗಿದೆ. ವರದಿಗಳ ಪ್ರಕಾರ, ಅಪಘಾತದಲ್ಲಿ ಸುಮಾರು 20 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಗಾಯಗೊಂಡ ವಿದ್ಯಾರ್ಥಿಗಳನ್ನ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಣ್ಣೂರಿನ ವಳಕ್ಕೈ ಸೇತುವೆ ಬಳಿ ಬಸ್ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ. ಅಪಘಾತ ಸಂಭವಿಸಿದಾಗ ಬಸ್ ಶಾಲೆಯಿಂದ ಮಕ್ಕಳನ್ನು ಮನೆಗೆ ಕರೆದೊಯ್ಯುತ್ತಿತ್ತು. ಸ್ಥಳೀಯ ನಿವಾಸಿಗಳು ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು.
ಭಾರತದ ಈ ವಲಯದಲ್ಲಿ ಮುಂದಿನ 5 ವರ್ಷದಲ್ಲಿ 60 ರಿಂದ 80 ಸಾವಿರ ಉದ್ಯೋಗಗಳು ಸೃಷ್ಟಿ : ಟೀಮ್ಲೀಸ್ ‘CSO’
ಬೆಂಗಳೂರು : ಮದ್ಯದ ಅಮಲಿನಲ್ಲಿ ತಹಸೀಲ್ದಾರ್ ಗೆ ಕಿರುಕುಳ : ಉದ್ಯಮಿ ಡಾಬಾ ರಾಜಣ್ಣ ಪುತ್ರ ಪೊಲೀಸ್ ವಶಕ್ಕೆ