ನವದೆಹಲಿ: ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಕಸ್ಟಡಿ ಅವಧಿಯನ್ನ ಮತ್ತೆ ಏಳು ದಿನಗಳವರೆಗೆ ವಿಸ್ತರಿಸುವಂತೆ ಜಾರಿ ನಿರ್ದೇಶನಾಲಯ (ED) ಗುರುವಾರ ರೂಸ್ ಅವೆನ್ಯೂ ನ್ಯಾಯಾಲಯದಲ್ಲಿ ಕೋರಿದೆ. ಆದ್ರೆ, ನ್ಯಾಯಾಲಯ ತನ್ನ ಆದೇಶವನ್ನ ಕಾಯ್ದಿರಿಸಿದೆ.
ಕೇಜ್ರಿವಾಲ್ ಅವರನ್ನ ಇತರ ಕೆಲವು ಜನರೊಂದಿಗೆ ಎದುರಿಸಲು ಅವರ ಹೆಚ್ಚಿನ ಕಸ್ಟಡಿ ವಿಚಾರಣೆಯ ಅಗತ್ಯವಿದೆ ಎಂದು ಇಡಿ ರಿಮಾಂಡ್ ಅರ್ಜಿಯನ್ನ ಸಲ್ಲಿಸಿತು. ಇನ್ನು ಎಎಪಿ ಗೋವಾ ಅಭ್ಯರ್ಥಿಗಳ ಹೇಳಿಕೆಗಳನ್ನ ದಾಖಲಿಸಲಾಗಿದೆ ಎಂದು ಇಡಿ ತಿಳಿಸಿದೆ.
ಕೇಜ್ರಿವಾಲ್ ಅವರ ಹೇಳಿಕೆಗಳನ್ನು ದಾಖಲಿಸಲಾಗಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ (ASG) ಎಸ್.ವಿ ರಾಜು ಅವರು ಇಡಿಯನ್ನ ಪ್ರತಿನಿಧಿಸಿದರು. ಈ ವೇಳೆ ಉದ್ದೇಶಪೂರ್ವಕವಾಗಿ ನಮ್ಮೊಂದಿಗೆ ಸಹಕರಿಸುತ್ತಿಲ್ಲ ಎಂದು ಎಎಸ್ಜಿ ಹೇಳಿದರು.
ಕಸ್ಟಡಿ ವಿಚಾರಣೆಯ ಸಮಯದಲ್ಲಿ ದಾಖಲಿಸಿದ ಹೇಳಿಕೆಯನ್ನ ಇಡಿ ನ್ಯಾಯಾಲಯಕ್ಕೆ ತೋರಿಸಿದೆ.
ಭಾರತದ ಹೊಸ ಫೈಟರ್ ಜೆಟ್ ‘ತೇಜಸ್ MK-1A’ ಮೊದಲ ಹಾರಾಟ ಯಶಸ್ವಿ : ಹಿಂದಿನ ವಿಮಾನಕ್ಕಿಂತ ಹೆಚ್ಚು ಸುಧಾರಿತ, ಮಾರಕ
ಕರ್ನಾಟಕವು ಅತ್ಯಂತ ದುರ್ದೈವದ ಪರಿಸ್ಥಿತಿಯಲ್ಲಿದೆ- ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಮಾಳವಿಕ ಅವಿನಾಶ್
BIG NEWS : ಅಮಿತ್ ಶಾ ಒಬ್ಬ ‘ಗೂಂಡಾ-ರೌಡಿ’ : ಕೇಂದ್ರ ಗೃಹ ಸಚಿವರ ವಿರುದ್ಧ ಡಾ. ಯತೀಂದ್ರ ಸಿದ್ದರಾಮಯ್ಯ ವಾಗ್ದಾಳಿ