ನವದೆಹಲಿ : ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯ್ದೆ, 2013 (ಪೋಶ್ ಕಾಯ್ದೆ) ವ್ಯಾಪ್ತಿಗೆ ರಾಜಕೀಯ ಪಕ್ಷಗಳನ್ನ ತರುವ ಪಿಐಎಲ್ ಪರಿಗಣಿಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.
ಚುನಾವಣಾ ಆಯೋಗವು ರಾಜಕೀಯ ಪಕ್ಷಗಳ ಮೇಲೆ ಮೇಲುಗೈ ಸಾಧಿಸುವ ಮತ್ತು ನಿಯಂತ್ರಿಸುವ ಸಾಂವಿಧಾನಿಕ ಸಂಸ್ಥೆಯಾಗಿರುವುದರಿಂದ ಚುನಾವಣಾ ಆಯೋಗವನ್ನ ಸಂಪರ್ಕಿಸುವಂತೆ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಮನಮೋಹನ್ ಅವರ ನ್ಯಾಯಪೀಠ ಅರ್ಜಿದಾರರಾದ ಯೋಗಮಯ ಅವರಿಗೆ ಸೂಚಿಸಿತು.
ಅರ್ಜಿದಾರರ ಪರ ಹಾಜರಾದ ಹಿರಿಯ ವಕೀಲೆ ಶೋಭಾ ಗುಪ್ತಾ, ರಾಜಕೀಯದಲ್ಲಿ ಮಹಿಳೆಯರನ್ನ ರಕ್ಷಿಸಬೇಕು ಮತ್ತು ಪೋಶ್ ಕಾಯ್ದೆಯನ್ನ ರಾಜಕೀಯ ಪಕ್ಷಗಳಿಗೆ ಅನ್ವಯಿಸಬೇಕು ಎಂದು ಹೇಳಿದರು.
ವ್ಯಾಖ್ಯಾನವು ತುಂಬಾ ಸ್ಪಷ್ಟವಾಗಿದೆ, ಇದು ಎಲ್ಲಾ ಪೀಡಿತ ಮಹಿಳೆಯರು ಮತ್ತು ಕೆಲಸದ ಸ್ಥಳಗಳನ್ನ ಒಳಗೊಂಡಿದೆ ಎಂದು ಅವರು ಹೇಳಿದರು.
BREAKING: ಲೋಕಸಭೆ, ರಾಜ್ಯಸಭೆ ಮಧ್ಯಾಹ್ನ 3 ಗಂಟೆಯವರೆಗೆ ಮುಂದೂಡಿಕೆ | Rajya Sabha, Lok Sabha adjourned
ಬೆಂಗಳೂರಲ್ಲಿ ಪತ್ನಿ ಕೇಸ್ ಹಾಕಿದ್ದಕ್ಕೆ ಮನನೊಂದು ಪತಿ ಆತ್ಮಹತ್ಯೆಗೆ ಶರಣು
BREAKING: ನೋಯ್ಡಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೊದಲ ವಿಮಾನ ಪ್ರಮಾಣೀಕರಣ ಪರೀಕ್ಷೆ ಯಶಸ್ವಿ