ವಿಜಯಪುರ : ಕಳೆದ ಕೆಲವು ದಿನಗಳ. ಹಿಂದೆ ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದಲ್ಲಿ ಎಸ್‌ಬಿಐ ಬ್ಯಾಂಕ್ ಗೆ ದರೋಡೆಕೋರರು ನುಗ್ಗೆ ಬ್ಯಾಂಕ್ ಮ್ಯಾನೇಜರ್ ಸಿಬ್ಬಂದಿಗಳನ್ನು ಕೈ ಕಾಲು ಕಟ್ಟಿ ಕೋಟ್ಯಾಂತರ ರೂಪಾಯಿ, ಚಿನ್ನಾಭರಣ ನಗದು ದೋಚಿ ಪರಾರಿಯಾಗಿದ್ದರು. ಇದೀಗ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಮಂಗಳವೇಡ ತಾಲೂಕಿನಹುಲಜಂತಿ ಗ್ರಾಮದ ಪಾಳು ಬಿದ್ದ ಮನೆಯ ಮೇಲ್ಚಾವಣಿಯಲ್ಲಿ ಬ್ಯಾಗ್ ಪತ್ತೆಯಾಗಿದೆ.
ಬ್ಯಾಗ್ ನಲ್ಲಿ 6 ಕೆಜಿ 55 ಗ್ರಾಂ ಚಿನ್ನಾಭರಣ, 41.4 ಲಕ್ಷ ನಗದು ಪತ್ತೆಯಾಗಿದೆ. ಮನೆಯ ಮೇಲೆ ಓರ್ವ ದರೋಡೆಕೋರ ಬ್ಯಾಗ್ ಬಚ್ಚಿಟ್ಟು ಪರಾರಿಯಾಗಿದ್ದಾನೆ. ಗ್ರಾಮದ ಜನರು ಮಂಗಳವೇಡ ಠಾಣೆಯ ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ. 136 ಪ್ಯಾಕೆಟ್ ಗಳಲ್ಲಿಗಳಲ್ಲಿದ್ದ ಚಿನ್ನಾಭರಣ ಪತ್ತೆಯಾದ ಬ್ಯಾಗಿನಲ್ಲಿ ಇವೆ ಒಟ್ಟು. 1.4 ಕೋಟಿ ಚಿನ್ನ, 20 ಕೆಜಿ ಚಿನ್ನಾಭರಣ ದರೋಡೆಯಾಗಿತ್ತು.
ಸದ್ಯ ಪತ್ತೆಯಾದ ಬ್ಯಾಗ್ ನಲ್ಲಿ ಚಿನ್ನಾಭರಣ ಮತ್ತು 1.30 ಲಕ್ಷ ನಗದು ಸಿಕ್ಕಿದೆ. ದರೋಡೆ ನಡೆದ ದಿನ ಸೆಪ್ಟೆಂಬರ್ 16ರಂದು ಇಕೋ ವಾಹನಪತ್ತೆಯಾಗಿತ್ತು. ದರೋಡೆಕೋರ ಬಳಸಿದ ವಾಹನ ಹೊಲಜಂತಿಯಲ್ಲಿ ಪತ್ತೆಯಾಗಿತ್ತು. ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಮಂಗಳವೇಡ ತಾಲೂಕಿನ ಹುಲಜಂತಿಯಲ್ಲಿ ಪತ್ತೆಯಾಗಿತ್ತು. ಗ್ರಾಮದಲ್ಲಿ ನುಗ್ಗಿದ ಇಕೋ ವಾಹನ ಬೈಕು ಒಂದಕ್ಕೆ ಡಿಕ್ಕಿಯಾಗಿತ್ತು. ಇದನ್ನು ಪ್ರಶ್ನಿಸಿದಕ್ಕೆ ಸಾವಿರನಿಗೆ ಪಿಸ್ತುಲ್ ತೋರಿಸಿ ಪರಾರಿಯಾಗಿದ್ದಾನೆ.
ಇದೇ ವೇಳೆ ಚಿನ್ನಾಭರಣ ಮತ್ತು ನಗದು ಇದ್ದ ಬ್ಯಾಂಕ್ ಎಸೆದು ಹೋಗಿದ್ದಾನೆ. ಮನೆ ಮೇಲ್ಚಾವಣಿಯಲ್ಲಿ ಬ್ಯಾಕ್ ಇಟ್ಟು ದರೋಡೆಕೋರರಾರಿ ಆಗಿದ್ದಾನೆ. ಇಡೀ ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ ದರೋಡೆಕೋರರನ್ನು ಶೀಘ್ರದಲ್ಲಿ ಬಂಧಿಸುತ್ತೇವೆ. ದರೋಡೆಕೋರಬಂದನಕ್ಕೆ ಈಗಾಗಲೇ 8 ತಂಡಗಳನ್ನು ರಚಿಸಲಾಗಿದೆ ಎಂದು ವಿಜಯಪುರದಲ್ಲಿ ಪೊಲೀಸ್ ವರಿಷ್ಠಧಿಕಾರಿ ಲಕ್ಷ್ಮಣ ನಿಂಬರಗಿ ಹೇಳಿಕೆ ನೀಡಿದರು.







