ಬಳ್ಳಾರಿ : ಬಳ್ಳಾರಿಯಲ್ಲಿ ಬ್ಯಾನರ್ ವಿಚಾರಕ್ಕೆ ಸಂಭಂದಪಟ್ಟಂತೆ ಫೈರಿಂಗ್ ವೇಳೆ ಓರ್ವ ಕಾಂಗ್ರೆಸ್ ಕಾರ್ಯಕರ್ತ ಸಾವನ್ನಪ್ಪಿದ್ದಾನೆ. ಇದೀಗ ಈ ಒಂದು ಘಟನೆಗೆ ಸಂಬಂಧಿಸಿದಂತೆ ಸತೀಶ್ ರೆಡ್ಡಿ ಗನ್ ಮ್ಯಾನ್ ಗುರುಚರಣ್ ಸಿಂಗ್ ಗನ್ ನಿಂದಲೇ ಬುಲೆಟ್ ಫೈರ್ ಆಗಿರೋದು ತನಿಖೆಯಲ್ಲಿ ಬಯಲಾಗಿದೆ.
ಹೌದು ಸತೀಶ್ ರೆಡ್ಡಿ ಗನ್ ಮ್ಯಾನ್ ಗುರುಚರಣ್ ಸಿಂಗ್ ಗನ್ ನಿಂದಲೇ ಬುಲೆಟ್ ಫೈರ್ ಆಗಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಗೆ ಗುಂಡೇಟು ತಗುಲಿದ್ದು ಬಯಲಾಗಿದೆ. ಇದೀಗ ಗುರುಚರಣ್ ಸಿಂಗ್ ನನ್ನ ಪೊಲೀಸದು ಅರೆಸ್ಟ್ ಮಾಡಿದ್ದಾರೆ. ಗನ್ ಮ್ಯಾನ್ ಗುರುಚರಣ್ ಸಿಂಗ್ ಗನ್ ನಿಂದಲೇ ಬುಲೆಟ್ ಫೈರ್ ಆಗಿದೆ. ರಾಜಶೇಖರ್ ದೇಹದಲ್ಲಿ ಗುರುಚರಣ್ ಸಿಂಗ್ ಗನ್ ಬುಲೆಟ್ ಪತ್ತೆಯಾಗಿದೆ. ಗುರುಚರಣ್ ಸಿಂಗ್ ಗನ್ ನಿಂದ ಬುಲೆಟ್ ಹಾರಿದೆ ಎಂಬ ಮಾಹಿತಿ ತಿಳಿದುಬಂದಿದೆ.
ಇನ್ನು ಭರತ್ ರೆಡ್ಡಿ ಆಪ್ತ ಸತೀಶ್ ರೆಡ್ಡಿ ಗನ್ ಮ್ಯಾನ್ ಗಳಾದ ಬಲ್ಜಿತ್ ಸಿಂಗ್, ಮಹೇಂದ್ರ ಸಿಂಗ್, ಗುರುಚರಣ್ ಸಿಂಗ್, ಶಾಸಕ ಭರತತ್ ರೆಡ್ಡಿ ಸರ್ಕಾರಿ ಗನ್ ಮ್ಯಾನ್ ಗಳಾದ ಬಸವರಾಜ್, ಶಾಸಕ ಜನಾರ್ಧನ್ ರೆಡ್ಡಿಯ ನಾಲ್ವರು ಸರ್ಕಾರಿ ಗನ್ ಮ್ಯಾನ್ ಮಾಜಿ ಸಚಿವ ಬಿ.ಶ್ರೀರಾಮುಲು ಗನ್ ಮ್ಯಾನ್ ವಶಕ್ಕೆ ಪಡೆಯಲಾಗಿದೆ. ಒಟ್ಟು 9 ಗನ್ ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.








