ಧಾರವಾಡ : ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜಾರ್ಜ್ ಫರ್ನಾಂಡಿಸ್ ಅವರ ಸಹೋದರನಿಗೆ ಬಹಳಷ್ಟು ಚಿತ್ರಹಿಂಸೆ ಕೊಟ್ಟಿದ್ದಾರೆ. ಅವರ ಬೆರಳಿಂದ ಉಗುರು ಕಿತ್ತಿ ಹಾಕಿದ್ದರು. ಈ ವೇಳೆ ಇಂದಿರಾಗಾಂಧಿ ಪುತ್ರ ಸಂಜಯ್ ಗಾಂಧಿ 1.7 ಜನರಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಿಸಿದ್ದರು ಎಂದು ವಿಕಸಿತ ಭಾರತ ಸಂಕಲ್ಪ ಸಭೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಮ್ಮ ಭಾಷಣದಲ್ಲಿ ಈ ಒಂದು ಹೇಳಿಕೆ ನೀಡಿದರು.
ಕಾಂಗ್ರೆಸ್ ಸರ್ಕಾರ ತುರ್ತು ಪರಿಸ್ಥಿತಿ ಹೇರಿ 50 ವರ್ಷ ಹಿನ್ನೆಲೆಯಲ್ಲಿ ಇಂದು ಧಾರವಾಡದ ಪುಟ್ಟಪ್ಪ ಸಭಾಭವನದಲ್ಲಿ ವಿಕಸಿತ ಭಾರತ ಸಂಕಲ್ಪ ಸಭೆ ಆಯೋಜನೆ ಮಾಡಲಾಗಿತ್ತು. ಒಂದು ಸಭೆಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಇವರು ಕೇಳಿದ ಹಾಡು ಹೇಳದಿದ್ದಕ್ಕೆ ಕಿಶೋರ್ ಕುಮಾರ್ ಅವರ ಹಾಡುಗಳಿಗೆ ಬ್ಯಾನ್ ಮಾಡಿದರು. ಕಿಶೋರ್ ಕುಮಾರ್ ಹಾಡು ಕೂಡ ವಿಡಿಯೋದಲ್ಲಿ ಬರಲಿಲ್ಲ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಲಾಲು ಪ್ರಸಾದ್ ಜೈಲು ಸೇರಿದ್ದರು. ಆದರೆ ಲಾಲು ಪ್ರಸಾದ್ ಯಾದವ್ ಈಗ ಕಾಂಗ್ರೆಸ್ ಜೊತೆಗೆ ಇದ್ದಾರೆ.
ತುರ್ತು ಪರಿಸ್ಥಿತಿಯಲ್ಲಿ ಇಂದಿರಾ ಗಾಂಧಿ ಪುತ್ರ ಸಂಜಯ್ ಗಾಂಧಿ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಿಸಿದರು. ರಸ್ತೆಯಲ್ಲಿ ಹೋಗುತ್ತಿದ್ದವರನ್ನು ಕರೆತಂದು ಚಿಕಿತ್ಸೆ ಮಾಡಿಸಿದರು 1.7 ಕೋಟಿ ಜನರ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಲಾಯಿತು. ಈ ಒಂದು ಶಸ್ತ್ರ ಚಿಕಿತ್ಸೆಯ ಬಳಿಕ ಇದರಲ್ಲಿ ಎಷ್ಟೋ ಜನ ಸತ್ತೇ ಹೋದರು. ಅಷ್ಟೆ ಅಲ್ಲದೇ ಮದುವೆಯಾಗದವರಿಗೂ ಕೂಡ ಈ ಒಂದು ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿದರು. ಅವರಲ್ಲಿ ಕೆಲವರು ಹೆದರಿಕೊಂಡು ಆತ್ಮಹತ್ಯೆಯನ್ನು ಸಹ ಮಾಡಿಕೊಂಡರು ಎಂದು ವಿಕಸಿತ ಭಾರತ ಸಂಕಲ್ಪ ಸಭೆಯಲ್ಲಿ ಹೇಳಿದರು.
ಇಂದಿರಾಗಾಂಧಿ ನ್ಯಾ.ಖನ್ನಾ ಬರೆದಿದ್ದ ಜಡ್ಜ್ಮೆಂಟ್ ಕಿತ್ತುಹಾಕಿದ್ದರು. 255 ಪುಟಗಳ ಆದೇಶ ಅದು ಆದರೆ ಇಂದು ಅದು ಎಲ್ಲಿಯೂ ಸಿಗುತ್ತಿಲ್ಲ. ಇಂದು ಸಂವಿಧಾನ ಹತ್ಯಾದಿನ ಎಂದು ಕಾಂಗ್ರೆಸ್ ವಿರುದ್ಧ ಜೋಶಿ ವಾಗ್ದಾಳಿ ನಡೆಸಿದರು. ನಾವು ಸಂವಿಧಾನ ತಿದ್ದಿದ್ದೇವೆ. ಕಾಶ್ಮೀರದ 370 ತೆಗೆದು ಹಾಕಿದ್ದೇವೆ. ಆರ್ಥಿಕವಾಗಿ ಹಿಂದುಳಿದವರಿಗೆ ಶೇ 10 ರಷ್ಟು ಮೀಸಲಾತಿ ಕೊಟ್ಟಿದ್ದೇವೆ. ಮೋದಿ ಅಂತವರು 10 ಜನ ಬಂದರು 370 ತೆಗೆಯಲು ಆಗಲ್ಲ ಅಂದ್ರು. ಆದರೆ ಎರಡನೇ ಬಾರಿ ಮೋದಿ ಅಧಿಕಾರಕ್ಕೆ ಬರುತ್ತಿದ್ದಂತೆ 370 ತೆಗೆದು ಹಾಕಿದರು ಎಂದು ಪ್ರಹ್ಲಾದ್ ಜೋಶಿ ತಿಳಿಸಿದರು.
ಜಾತ್ಯತೀತತೆ ನಮ್ಮ ದೇಶದ ಜನರ ರಕ್ತದಲ್ಲಿಯೇ ಇದೆ. ಆದರೆ ಕೆಲವರು ಅಂಬೇಡ್ಕರ್ ಸಂವಿಧಾನ ಬದಲಿಸುತ್ತಿದ್ದಾರೆ. ಇಂದಿರಾಗಾಂಧಿ ಅವರು ತುರ್ತುಪರಿಸ್ಥಿತಿ ಜಾರಿಗೆ ತಂದರು ಆ ಮೂಲಕ ದೇಶದ ಸಂವಿಧಾನವನ್ನೇ ಬದಲಾಯಿಸಿದರು. ಅದರ ನೆನಪು ಮಾಡಿಕೊಡುವುದಕ್ಕಾಗಿ ಈ ಒಂದು ಕಾರ್ಯಕ್ರಮ ಯೋಜನೆ ಮಾಡಲಾಗಿದೆ. ಇಂದು ಚುನಾವಣೆ ಕುರಿತು ಅನೇಕರು ಮಾತನಾಡುತ್ತಾರೆ. ಆದರೆ ರಾಜ್ಯಸಭಾ ಸದಸ್ಯರನ್ನು ನ್ಯಾಯಾಧೀಶರನ್ನಾಗಿ ಮಾಡಿದರು. ಬಳಿಕ ನ್ಯಾಯಾಧೀಶರನ್ನೇ ರಾಜ್ಯಸಭಾ ಸದಸ್ಯ ಮಾಡಿದರು. ತಮಗೆ ಬೇಕಾದಾಗ ವಾಯು ಸೇನೆ ಹೆಲಿಕಾಪ್ಟರ್ ಬಳಕೆ ಮಾಡಿದರು.
ನ್ಯಾ.ಖನ್ನಾ ಇಂದಿರಾ ಗಾಂಧಿ ಅವರ ಆಯ್ಕೆಯನ್ನು ಅನುಚಿತಗೊಳಿಸಿದರು. ಆರು ವರ್ಷ ಚುನಾವಣೆಗೆ ನಿಲ್ಲದಂತೆ ಅನೂರ್ಜಿತಗೊಳಿಸಿದ್ದರು. ಆದರೆ ಇಂದಿರಾಗಾಂಧಿ ಅವರಿಗೆ ಸರ್ವಾಧಿಕಾರ ಬೇಕಿತ್ತು. ಅದಕ್ಕಾಗಿಯೇ ಅವರು ಸಂವಿಧಾನಕ್ಕೆ ತಿದ್ದುಪಡಿ ತಂದರು 39ನೇ ಆರ್ಟಿಕಲ್ಗೆ ಇಂದಿರಾಗಾಂಧಿ ತಿದ್ದುಪಡಿ ತಂದರು ಉಪರಾಷ್ಟ್ರಪತಿ ಸ್ಪೀಕರ್ ಪ್ರಧಾನಿಯನ್ನು ಪ್ರಶ್ನಿಸುವಂತಿಲ್ಲ ಯಾರು ಪ್ರಶ್ನಿಸುವಂತಿಲ್ಲ ಅನ್ನೋ ತಿದ್ದುಪಡಿ ಮಾಡಿದರು. ಬಳಿಕ ತುರ್ತು ಪರಿಸ್ಥಿತಿ ಹೇರಲಾಯಿತು ಎಂದು ಪ್ರಹ್ಲಾದ್ ಜೋಶಿ ತಿಳಿಸಿದರು.