ಉಡುಪಿ : ದೇಶದಲ್ಲಿ ಸನಾತನ ಬೋರ್ಡ್ ಜಾರಿಗೆ ಬರಬೇಕು. ದೇವಾಲಯಗಳ ಸಂಪತ್ತಿನಿಂದ ಊರಿಗೆ ಶಿಕ್ಷಣ ಆಗಬೇಕು ಎಂದು ಉಡುಪಿಯಲ್ಲಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಗ್ರಹಿಸಿದ್ದಾರೆ.
ಇನ್ನು ಕುಂಭಮೇಳದ ಕುರಿತು ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ ಕುರಿತು ಪ್ರತಿಕ್ರಿಯಿಸಿದ ಅವರು, ಮಲ್ಲಿಕಾರ್ಜುನ್ ಖರ್ಗೆ ಅವರ ಆಶಯಗಳು ತೆರೆದಿಟ್ಟಿವೆ. ಎಲ್ಲರ ಭಾವನೆಯನ್ನು ಗೌರವಿಸಬೇಕು ಯಾರನ್ನು ನೋಯಿಸಬಾರದು. ಅವರ ಹೇಳಿಕೆಗೆ ನಾವು ಯಾವುದೇ ಪ್ರತಿಕ್ರಿಯೆ ಕೊಡಲ್ಲ ಮಲ್ಲಿಕಾರ್ಜುನ ಖರ್ಗೆ ಅವರದು ಬಾಲಿಷ ಹೇಳಿಕೆ ಎಂದರು.
ಖರ್ಗೆ ಅವರ ಹೇಳಿಕೆಯ ಪ್ರಕಾರ ಕುಂಭಮೇಳಕ್ಕೆ ಬಂದ ಎಲ್ಲರನ್ನು ಮೂರ್ಖರೆಂದು ಹೇಳಿದಂತೆ ಆಯ್ತು. ರಾಜಕೀಯ ಪಕ್ಷಗಳು ಮತಭೇದ ಮರೆತು ಯಶಸ್ವಿಗೆ ಕೈಜೋಡಿಸಿ. ದೇಶದಲ್ಲಿ ಸನಾತನ ಬೋರ್ಡ್ ಜಾರಿಗೆ ಬರಬೇಕು. ದೇವಾಲಯಗಳ ಸಂಪತ್ತಿನಿಂದ ಊರಿಗೆ ಶಿಕ್ಷಣ ಆಗಬೇಕು. ಅಯೋಧ್ಯೆಯಲ್ಲಿ ಭಕ್ತರ ದರ್ಶನಕ್ಕೆ ಸುಲಲಿತ ವ್ಯವಸ್ಥೆ ಇದೆ.
ಇನ್ನು ಪ್ರಯಾಗ್ ರಾಜ್ ನಲ್ಲಿ ಕಾಲ್ತುಳಿತದಲ್ಲಿ ಹಲವರು ಸಾವನ್ನಪ್ಪಿದ್ದ ಕುರಿತು ಪ್ರತಿಕ್ರಯಿಸಿದ ಅವರು ಕುಂಭಮೇಳದಲ್ಲಿ ಕೆಲ ಅನಾನುಕೂಲತೆ ಆಗಿದೆ ಎಂಬುದರ ಕುರಿತು ಮಾಹಿತಿ ಇದೆ. ಯಾವುದೇ ಅನಾನುಕೂಲತೆಗಳು ಆಗದಂತೆ ದೇವರಲ್ಲಿ ಪ್ರಾರ್ಥಿಸಲಾಗಿದೆ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದರು.