ಬೆಂಗಳೂರು : ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ ಡಿಐಜಿ ಅಲೋಕ್ ಕುಮಾರ್ ಹೆಸರಿಗೆ ಕಳಂಕ ತರಲು ಕೈದಿಗಳು ಸಂಚು ರೂಪಿಸಿದ್ದಾರೆ. ಜೈಲಿನ ಒಳಗಿನಿಂದಲೇ ಅಲೋಕ ಕುಮಾರ್ ವಿರುದ್ಧದ ವಿಡಿಯೋ ಮಾಡಿದ್ದಾರೆ. ಅಲೋಕ ಕುಮಾರ್ ಅವರೇ ಮೊಬೈಲ್ ಕೊಟ್ಟಿದ್ದಾರೆ ಎಂದು ಹೇಳಿಕೆ ಕೊಟ್ಟಿದ್ದಾರೆ.
ಆರ್ಸಿಬಿ ಮ್ಯಾಚ್ ಇದೆ ಈ ಸಲ ಕಪ್ ನಮ್ದೇ ಎಂದು ಕೈದಿಗಳು ವಿಡಿಯೋ ಮಾಡಿದ್ದಾರೆ. ವಿಡಿಯೋ ಬಳಿಕ ಪೊಲೀಸರು ಅಲರ್ಟ್ ಆಗಿದ್ದು, ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಧಿಕಾರಿಗಳು ಶೋಧ ನೆಡೆಸುತ್ತಿದ್ದಾರೆ ಜೈಲಿನೊಳಗೆ ವಿಡಿಯೋ ಮಾಡಿದ್ದ ವಿಚಾರಣಾನಾಧೀನ ಕೈದಿಗಳು ಪತ್ತೆಯಾಗಿದ್ದು ಕೈದಿಗಳನ್ನು ಅವರ ಹೆಸರಿನ ಆಧಾರದ ಬೇರೆ ಬೇರೆ ಬ್ಯಾರೆಕಗೆ ಶಿಫ್ಟ್ ಮಾಡಲಾಗಿದೆ.
ಅಲೋಕ್ ಕುಮಾರ್ ವಿರುದ್ಧ ವಿಡಿಯೋ ಮಾಡಿದ್ದ ಕೈದಿಗಳು ಲಾಕ್ ಆಗಿದ್ದಾರೆ. ವಿಡಿಯೋ ಬಳಿಕ ಆದ ಅಧಿಕಾರಿಗಳು ಪರಪ್ಪನ ಅಗ್ರಹಾರ ಶೋಧ ನೆಡಿಸಲಾಗಿದೆ. ಇವಳೇ ಡ್ರೈನೇಜ್ ನೀರು ಹೋಗುವ ಸ್ಥಳದಲ್ಲಿ ಕೈದಿಗಳು ಬಟ್ಟೆಯಲ್ಲಿ ಮೊಬೈಲ್ ಸುದ್ದಿ ಇಟ್ಟಿದ್ದಾರೆ, ಕೊಡಲೇ ಪೊಲೀಸರು ಕೈದಿಗಳಿಂದಲೇ ಮೊಬೈಲ್ ಗಳನ್ನು ಹೊರಗಡೆ ತೆಗೆಸಿದ್ದು ಇನ್ನಷ್ಟು ಶೋಧ ಕಾರ್ಯ ಮುಂದುವರಿಸಿದ್ದಾರೆ.








