ಮುಂಬೈ : ಭಾರತದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಹಾಗೂ ಮುಂಬೈ ಮೂಲದ ಉದ್ಯಮಿ ರವಿ ಘಾಯ್ ಪುತ್ರಿ ಸಾನಿಯಾ ಚಾಂದೋಕ್ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗ್ತಿದ್ದಾರೆ.ಮುಂದಿನ ಮಾರ್ಚ್‌ನಲ್ಲಿ ಸಾನಿಯಾ & ಅರ್ಜುನ್ ಅವರ ವಿವಾಹ ಮಹೋತ್ಸವ ನಡೆಯಲಿದೆ ಎಂದು ವರದಿಗಳು ತಿಳಿಸಿವೆ. ವಿವಾಹ ಮಹೋತ್ಸವಗಳು ಮಾರ್ಚ್ 3 ರಂದು ಪ್ರಾರಂಭವಾಗಲಿದ್ದು, ಮುಖ್ಯ ಸಮಾರಂಭವು ಮಾರ್ಚ್ 5 ರಂದು ನಡೆಯಲಿದೆ.
ಇತ್ತೀಚೆಗೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಮುಂಬೈ ಇಂಡಿಯನ್ಸ್‌ನಿಂದ ಲಕ್ನೋ ಸೂಪರ್ ಜೈಂಟ್ಸ್‌ಗೆ ವರ್ಗಾವಣೆಗೊಂಡ ಅರ್ಜುನ್, ತಮ್ಮ ವೈಯಕ್ತಿಕ ಜೀವನದಲ್ಲಿ ದೊಡ್ಡ ಹೆಜ್ಜೆ ಇಡಲು ಸಜ್ಜಾಗಿದ್ದಾರೆ. ಸಾನಿಯಾ ಒಬ್ಬ ಯಶಸ್ವಿ ಉದ್ಯಮಿ ಮತ್ತು ಸ್ವತಃ ಪ್ರಮುಖ ಹಿನ್ನೆಲೆಯಿಂದ ಬಂದವರು. ಅವರು ಮುಂಬೈನ ಪ್ರಸಿದ್ಧ ಉದ್ಯಮಿ ರವಿ ಘಾಯ್ ಅವರ ಮೊಮ್ಮಗಳು. ಅವರು ಸ್ವಲ್ಪ ಸಮಯದಿಂದ ಅರ್ಜುನ್ ತೆಂಡೂಲ್ಕರ್ ಬಾಲ್ಯದ ಗೆಳತಿ ಸಹ ಹೌದು.
ಸಾನಿಯಾ ಚಾಂದೋಕ್, ಘಾಯ್ ಕುಟುಂಬದ ಯುವತಿಯಾಗಿದ್ದಾರೆ. ʻಘಾಯ್ʼ ಮುಂಬೈನಲ್ಲಿ ಬಹಳ ಪ್ರಸಿದ್ಧ ವ್ಯಾಪಾರ ಕುಟುಂಬಗಳಲ್ಲಿ ಒಂದಾಗಿದೆ. ಸಾನಿಯಾ ಚಂದೋಕ್ ಮುಂಬೈ ಮೂಲದ ಉದ್ಯಮಿ ರವಿ ಘಾಯ್ ಅವರ ಮೊಮ್ಮಗಳು. ರವಿ ಘಾಯ್ ಬ್ರೂಕ್ಲಿನ್ ಕ್ರೀಮರಿಯ ಮೂಲ ಕಂಪನಿಯಾದ ಗ್ರಾವಿಸ್ ಗ್ರೂಪ್‌ನ ಅಧ್ಯಕ್ಷರು. ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ದಾಖಲೆಗಳ ಪ್ರಕಾರ, ಸಾನಿಯಾ ಮುಂಬೈ ಮೂಲದ ಮಿಸ್ಟರ್ ಪಾವ್ಸ್ ಪೆಟ್ ಸ್ಪಾ & ಸ್ಟೋರ್ ಎಲ್‌ಎಲ್‌ಪಿಯಲ್ಲಿ ನಿಯೋಜಿತ ಪಾಲುದಾರ ಮತ್ತು ನಿರ್ದೇಶಕಿಯೂ ಆಗಿದ್ದಾರೆ.
2025ರ ಆಗಸ್ಟ್ 13ರಂದು ಅರ್ಜುನ್ ಮತ್ತು ಸಾನೀಯಾ ಚಾಂದೋಕ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆಪ್ತ ಸ್ನೇಹಿತರು ಮತ್ತು ಎರಡೂ ಕುಟುಂಬಗಳ ಸದಸ್ಯರ ಸಮ್ಮುಖದಲ್ಲಿ ಅರ್ಜುನ್ ಮತ್ತು ಸಾನಿಯಾ ಚಾಂದೋಕ್ ಉಂಗುರ ಬದಲಾಯಿಸಿಕೊಂಡಿದ್ದರು. ಇದೀಗ ಆಪ್ತ ಮೂಲಗಳು ಮಾರ್ಚ್‌ನಲ್ಲಿ ಇಬ್ಬರ ವಿವಾಹ ಮಹೋತ್ಸವ ನಡೆಯುವುದಾಗಿ ತಿಳಿಸಿವೆ.








