ಬೆಂಗಳೂರು : ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ನಾಲ್ಕೂವರೆ ಕೆಜಿ ಚಿನ್ನ ಕಳುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬೆಂಗಳೂರು ಬಳ್ಳಾರಿ ಹಾಗೂ ತಿರುವನಂತಪುರದಲ್ಲಿ ದಾಳಿ ಮಾಡಿದ್ದಾರೆ. ಶ್ರೀರಾಮಪುರ ಅಯ್ಯಪ್ಪ ದೇವಸ್ಥಾನ ಮತ್ತು ಟ್ರಸ್ಟಿ ನಿವಾಸದ ಮೇಲೂ ದಾಳಿ ಮಾಡಿದ್ದಾರೆ. ಬೆಳ್ಳಂ ಬೆಳಗ್ಗೆ ದಾಳಿ ಮಾಡಿ ಇಡಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.
ಇದೀಗ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಳ್ಳಾರಿಯ ರೊದ್ದಂ ಜುವೆಲರಿ ಅಂಗಡಿ ಮೇಲು ಇಡೀ ದಾಳಿ ಮಾಡಿದೆ. ಬಳ್ಳಾರಿ ರೊದ್ದಂ ಚಿನ್ನದ ಅಂಗಡಿ ಮಾಲೀಕನಾಗಿರುವ ಗೋವರ್ಧನ್, ಚಿನ್ನ ಖರೀದಿ ಆರೋಪದ ಅಡಿ ಈಗಾಗಲೇ ಗೋವರ್ಧನ್ ಅರೆಸ್ಟ್ ಆಗಿದ್ದಾರೆ. ಆರೋಪಿ ಉನ್ನಿಕೃಷ್ಣನನಿಂದ ಗೋವರ್ಧನ ಚಿನ್ನ ಖರೀದಿ ಮಾಡಿದ್ದರು.
470 ಗ್ರಾಂ ಕದ್ದ ಚಿನ್ನವನ್ನು ಖರೀದಿ ಮಾಡಿದ ಆರೋಪದಲ್ಲಿ ಜೈಲು ಪಾಲಾಗಿದ್ದಾರೆ ಇದೀಗ ಚಿನ್ನದ ಅಂಗಡಿಯ ಮೇಲೆ ಇಡೀ ಅಧಿಕಾರಿಗಳು ದಾಳಿ ಮಾಡಿ ದಾಖಲೆ ಪರಿಶೀಲನೆ ಮಾಡುತ್ತಿದ್ದಾರೆ ಅಂಗಡಿಯಲ್ಲಿ ಇವರು ಹಿಡಿದಿ ಅಧಿಕಾರಿಗಳಿಂದ ಪರಿಶೀಲನೆ ನಡೆಸಲಾಗುತ್ತಿದೆ.








